ಶಿವನ 15 ಅದ್ಭುತ ಮಂತ್ರಗಳು:
1. ಓಂ ಶಿವಾಯ ನಮಃ
2. ಓಂ ಸರ್ವಾತ್ಮನೇ ನಮಃ
3. ಓಂ ತ್ರಿನೇತ್ರಾಯ ನಮಃ
4. ಓಂ ಹರಾಯ ನಮಃ
5. ಓಂ ಇಂದ್ರಮುಖಾಯ ನಮಃ
6. ಓಂ ಶ್ರೀಕಂಠಾಯ ನಮಃ
7. ಓಂ ವಾಮದೇವಾಯ ನಮಃ
8. ಓಂ ತತ್ಪುರುಷಾಯ ನಮಃ
9. ಓಂ ಈಶಾನಾಯ ನಮಃ
10. ಓಂ ಅನಂತಧರ್ಮಾಯ ನಮಃ
11. ಓಂ ಜ್ಞಾನಭೂತಾಯ ನಮಃ
12. ಓಂ ಅನಂತವೈರಾಗ್ಯಸಿಂಗಾಯೈ ನಮಃ
13. ಓಂ ಪ್ರಧಾನಾಯ ನಮಃ
14. ಓಂ ವ್ಯೋಮಾತ್ಮನೇ ನಮಃ
15. ಓಂ ಯುಕ್ತಕೇಶಾತ್ಮರೂಪಾಯ ನಮಃ
ನೀವು ಯಾವುದೇ ರೀತಿಯ ಸಾಲದಲ್ಲಿ ಮುಳುಗಿದ್ದರೆ, ಶಿವನಿಗೆ ನಮಸ್ಕರಿಸುವಾಗ 15 ಮಂತ್ರಗಳನ್ನು ಜಪಿಸಿ. ಖಂಡಿತವಾಗಿ ಸಾಲದಿಂದ ಮುಕ್ತರಾಗುತ್ತೀರಿ. ಈ ಮೇಲಿನ 15 ಶಿವ ಮಂತ್ರಗಳನ್ನು ಪಠಿಸುವ ಮುನ್ನ ನೀವು ಶಿವ ಗಾಯತ್ರಿ ಮಂತ್ರವನ್ನು ಪಠಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಶಿವ ಗಾಯತ್ರಿ ಮಂತ್ರದೊಂದಿಗೆ ಈ 15 ಶಿವ ಮಂತ್ರಗಳನ್ನು ಪಠಿಸುವುದರಿಂದ ಅದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಶಿವ ಗಾಯತ್ರಿ ಮಂತ್ರ:
''ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರ ಪ್ರಚೋದಯಾತ್''.
ಓಂ ನಮಃ ಶಿವಾಯ ಮಂತ್ರದ ಮಹತ್ವ:
ಓಂ ನಮಃ ಶಿವಾಯ ಮಂತ್ರವನ್ನು ಶಿವ ಪಂಚಾಕ್ಷರಿ ಮಂತ್ರವೆಂದು ಕರೆಯಲಾಗುತ್ತದೆ. ಶಿವನು ಅಗ್ನಿಸ್ತಂಭದ ರೂಪದಲ್ಲಿ ಕಾಣಿಸಿಕೊಂಡಾಗ, ಅವನಿಗೆ ಐದು ಮುಖಗಳಿದ್ದವು. ಪಂಚಭೂತಗಳೆಂದರೆ ಭೂಮಿ, ನೀರು, ಆಕಾಶ, ಬೆಂಕಿ ಮತ್ತು ಗಾಳಿ. ಪ್ರಾರಂಭವಾದ ಮೊದಲ ಪದ ಓಂ ಪದ, ಉಳಿದ ಐದು ಪದಗಳು ನಮಃ ಶಿವಾಯ ಅವರ ಐದು ಮುಖಗಳಿಂದ ಹುಟ್ಟಿಕೊಂಡಿವೆ, ಇದು ಬ್ರಹ್ಮಾಂಡದ ಮೊದಲ ಮಂತ್ರವೆಂದು ಪರಿಗಣಿಸಲ್ಪಟ್ಟಿದೆ. ಇದು ಮಹಾಮಂತ್ರವಾಗಿದೆ. ಈ ಮಂತ್ರದ ಐದು ಅಕ್ಷರಗಳಿಂದ ಐದು ವರ್ಗಗಳ ಐದು ಮೂಲ ಸ್ವರಗಳು ಮತ್ತು ವ್ಯಂಜನಗಳು ಕಾಣಿಸಿಕೊಂಡವು. ಈ ಶಿರೋಮಂತ್ರದಿಂದ ತ್ರಿಪದ ಗಾಯತ್ರಿಯೂ, ಈ ಗಾಯತ್ರಿಯಿಂದ ವೇದಗಳು ಮತ್ತು ವೇದಗಳಿಂದ ಕೋಟಿ ಮಂತ್ರಗಳೂ ಕಾಣಿಸಿಕೊಂಡವು.
ಪೂಜಾ ವಿಧಿಗಳುಆಷಾಢ ಮಾಸದ ಭಾನುವಾರದಂದು ಈ ಸೂರ್ಯ ಮಂತ್ರಗಳನ್ನೇ ಪಠಿಸಿ..!
ಈ ಮಂತ್ರದ ಪಠಣವು ಎಲ್ಲಾ ಆಸೆಗಳನ್ನು ಪೂರೈಸಲು ಕಾರಣವಾಗುತ್ತದೆ. ಈ ಮಂತ್ರವನ್ನು ಜಪಿಸುವವರ ಎಲ್ಲಾ ಕಾಯಿಲೆಗಳು ಸಹ ಶಮನಗೊಳ್ಳುತ್ತದೆ. ಈ ಮಂತ್ರವನ್ನು ಪಠಿಸುವವನಿಗೆ ಅಡೆತಡೆಗಳು ಸಹ ಬರುವುದಿಲ್ಲ ಮತ್ತು ಯಮರಾಜನು ತನ್ನ ದೂತರಿಗೆ ಈ ಮಂತ್ರವನ್ನು ಪಠಿಸುವವನ ಹತ್ತಿರ ಹೋಗಬೇಡಿ ಎಂದು ಆದೇಶಿಸಿದ್ದಾನೆ. ಈ ಮಂತ್ರವನ್ನು ಪಠಿಸುವ ವ್ಯಕ್ತಿಯು ಯಾವುದೇ ಮರಣ ಭಯವನ್ನು ಇಟ್ಟುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಈ ಮಂತ್ರದಿಂದ ಓರ್ವ ವ್ಯಕ್ತಿಯು ಮೋಕ್ಷವನ್ನು ಪಡೆದುಕೊಳ್ಳುತ್ತಾನೆ.
ಶಿವನಿಗೆ ಸಂಬಂಧಿಸಿದ ಈ 15 ಶಿವ ಮಂತ್ರಗಳೊಂದಿಗೆ ಶಿವ ಗಾಯತ್ರಿ ಮಂತ್ರವನ್ನು ಮತ್ತು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು. ಶಿವನಲ್ಲಿ ಐಕ್ಯವಾಗಲು ನಮಗೆ ಈ ಮಂತ್ರಗಳು ಸಹಕರಿಸುತ್ತದೆ.