ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ

 Belly fat reducing drinks : ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹ ಕೊಬ್ಬನ್ನು ಸುಲಭವಾಗಿ  ಕರಗಿಸಬಹುದು.   



ಬಹುತೇಕ ಮಂದಿಯದ್ದು ದೇಹ ತೂಕ ಹೆಚ್ಚುತ್ತಿರುವುದೇ ಸಮಸ್ಯೆ

ಹೊಟ್ಟೆಯ ಭಾಗದ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ.

ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.

ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ  


Belly fat reducing drinks : ದೇಹ ತೂಕ ಹೆಚ್ಚಾಗುತ್ತಿದೆ ಎನ್ನುವುದು ಇತ್ತಿಚೀನ ದಿನಗಳಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಒಮ್ಮೆ ತೂಕ ಹೆಚ್ಚಾದರೆ ಮತ್ತೆ ಅದನ್ನು ಇಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹೆಚ್ಚಿನ ಕೇಸ್ ಗಳಲ್ಲಿ ಈ ಪ್ರಯತ್ನ ಯಾವುದೇ ರೀತಿಯ ಪ್ರಯೋಜನ ನೀಡುವುದಿಲ್ಲ. ಇನ್ನು ಜಿಮ್, ಜುಂಬಾ, ಆರೋಬಿಕ್ಸ್ ಎಂದೆಲ್ಲಾ ಹೇಳಿದರೂ ಇದು ಎಲ್ಲರಿಗೂ ಹೊಂದುವುದಿಲ್ಲ. ದೇಹ ತೂಕ ಇಳಿಸುವ ಪ್ರಯತ್ನದ ಫಲವಾಗಿ ದೇಹದ ಇತರ ಭಾಗಗಳ ಕೊಬ್ಬು ಕರಗಿದರೂ ಹೊಟ್ಟೆಯ ಭಾಗದ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಕೊಬ್ಬು ಕರಗಿಸಲು ಮಾಡುವ ಎಲ್ಲಾ ಪ್ರಯತ್ನಗಳೂ ವ್ಯರ್ಥ ಎಂದೆನಿಸಲು ಆರಂಭವಾಗುತ್ತದೆ. ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹ ಕೊಬ್ಬನ್ನು ಸುಲಭವಾಗಿ  ಕರಗಿಸಬಹುದು. 

ಹೊಟ್ಟೆಯ ಕೊಬನ್ನು ಕರಗಿಸುವುದು ಹೇಗೆ? :  

ಅನೇಕ ಜನರಲ್ಲಿ ದೇಹದ ಇತರ ಭಾಗಗಳು ತೆಳ್ಳಗೆ ಇರುತ್ತವೆ. ಆದರೆ, ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಮಾತ್ರ ಅತಿಯಾದ ಕೊಬ್ಬು ತುಂಬಿರುತ್ತದೆ. ಅನಾರೋಗ್ಯಕರ ಆಹಾರ ಸೇವನೆ ಕೂಡಾ ಇದಕ್ಕೆ ಕಾರಣ. ಇನ್ಸ್ಟಂಟ್ ಆಹಾರ ಸೇವನೆಯಿಂದ ಹೊಟ್ಟೆಯ ಭಾಗ ದಪ್ಪಾಗಾಗಲು ಆರಂಭವಾಗುತ್ತದೆ. ಒಮ್ಮೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. 




ಕೆಲವು ಮನೆಮದ್ದುಗಳು ಹೊಟ್ಟೆಯಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಹೊಟ್ಟೆಯ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕರಗಿಸುವುದು ಸಾಧ್ಯವಾಗುತ್ತದೆ. ಅಲ್ಲದೆ ಇವುಗಳ ಸೇವನೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎನ್ನುವುದು ಮತ್ತೊಂದು ಖುಷಿಯ ವಿಚಾರ. 

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮನೆಮದ್ದುಗಳು:

ನೆಲ್ಲಿಕಾಯಿ ರಸ:

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೆಲ್ಲಿಕಾಯಿ ರಸವು ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಿನ ಪ್ರಮಾ ಣದಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ನೆಲ್ಲಿಕಾಯಿ ರಸವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಮೆಂತ್ಯೆ  :

ತೂಕ ಇಳಿಸುವ ಆಹಾರದಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿರುವ ಮೆಂತ್ಯೆಗೆ ವಿಶಿಷ್ಟ ಸ್ಥಾನ ಇರಲೇಬೇಕು. ಮೆಂತ್ಯೆಯನ್ನು  ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಈ ನೀರನ್ನು ಬಿಸಿ ಮಾಡಿ  ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ  ಪ್ರತಿದಿನ ಈ ನೀರನ್ನು ಕುಡಿಯುತ್ತಾ ಬಂದರೆ ಹೊಟ್ಟೆ ಭಾಗದ ಕೊಬ್ಬು ಸುಲಭವಾಗಿ ಕರಗುವುದು. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಕೂಡಾ ಸಹಾಯ ಮಾಡುತ್ತದೆ. 

ನಿಂಬೆ ರಸ : 

ನಿಂಬೆ ರಸ ಕೂಡಾ ದಪ್ಪಗಿರುವ ಹೊಟ್ಟೆಯನ್ನು ಮತ್ತೆ ಶೇಪ್ ಗೆ ತರಲು ಸಹಾಯಕವಾಗಿದೆ. ನಿಂಬೆ ರಸವು ಚಯಾಪಚಯವನ್ನು ಸುಧಾರಿಸುತ್ತದೆ. ಕೊಬ್ಬನ್ನು ಕರಗಿಸುತ್ತದೆ. ಅದರಲ್ಲೂ ಹೊಟ್ಟೆಯ ಭಾಗದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ತ್ವರಿತ ಪರಿಣಾಮವನ್ನು ಬೀರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯಿರಿ. ತೂಕ ಇಳಿಸುವ ಪ್ರಯತ್ನಗಳಲ್ಲಿ ನಿಂಬೆ ರಸ ಅತ್ಯಂತ ಪ್ರಯೋಜನಕಾರಿಯಾಗಿದೆ. 

 ಓಮ ಕಾಳಿನ ನೀರು :  

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಓಮ ಕಾಳಿನ ನೀರನ್ನು ಕುಡಿಯುತ್ತಿದ್ದರೆ, ಹೊಟ್ಟೆಯ ಗಾತ್ರ ಇಳಿಯುವುದನ್ನು ಬಹಳ ಬೇಗನೆ ಗಮನಿಸಬಹುದು.  ಒಂದು ಚಮಚ ಓಮ ಕಾಳನ್ನು 3 ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರು 3 ಲೋಟದಿಂದ 2 ಲೋಟಕ್ಕೆ ಇಳಿಯುವವರೆಗೆ ಕುದಿಸಬೇಕು. ರಾತ್ರಿ ಊಟವಾದ ಅರ್ಧ ಗಂಟೆಯ ನಂತರ ಈ ನೀರನ್ನು ಕುಡಿಯಿರಿ ಮತ್ತು ಮರುದಿನ ಬೆಳಿಗ್ಗೆ ಉಳಿದ ನೀರನ್ನು ಕುಡಿಯಿರಿ.  ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಪರಿಣಾಮ ಕಂಡು ಬರುವುದು. 

ಓಮ ಕಾಳಿನ ನೀರು ದೇಹದಲ್ಲಿ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಬ್ಬನ್ನು ಕರಗಿಸುತ್ತದೆ ಮತ್ತು ದೇಹದ ತೂಕವನ್ನು ತ್ವರಿತವಾಗಿ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕಡಿಮೆ ಮಾಡುತ್ತದೆ.






ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...