ಈ ಬಾರಿ ಮಹಾಶಿವರಾತ್ರಿಯಂದು, 300 ವರ್ಷಗಳ ನಂತರ, ಈ ವಿಶೇಷ ಯೋಗವು ಸಂಭವಿಸಲಿದೆ. ಈ ಅಪರೂಪದ ಯೋಗ ಮತ್ತು ಶುಭ ಸಂದರ್ಭದಲ್ಲಿ ಭಗವಾನ್ ಶಂಕರನನ್ನು ಪೂಜಿಸುವ ಮೂಲಕ, ಭಕ್ತರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಇದರಿಂದಾಗಿ ಕೆಲವು ರಾಶಿಯ ಜನರು ಶಿವನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಹಾಗಾಗಿಯೇ 2024 ರ ಮಹಾಶಿವರಾತ್ರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ವರ್ಷ ಮಹಾಶಿವರಾತ್ರಿಯನ್ನು ಮಾ. 8, ಶುಕ್ರವಾರ ದಂದು ಆಚರಣೆ ಮಾಡಲಾಗುತ್ತದೆ. ಈ ದಿನ ಭಕ್ತಿಯಿಂದ ಉಪವಾಸವನ್ನು ಆಚರಿಸುವುದರ ಜೊತೆಗೆ ಶಿವನನ್ನು ಶ್ರದ್ದೆಯಿಂದ ಪೂಜಿಸಿದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣಬಹುದಾಗಿದೆ. ಮಹಾಶಿವರಾತ್ರಿಯಂದು ಭಗವಾನ್ ಶಿವನನ್ನು ಪೂಜಿಸುವ ಮೂಲಕ ಮತ್ತು ಸರ್ವಾರ್ಥ ಸಿದ್ಧಿ ಯೋಗಕ್ಕಾಗಿ ಉಪವಾಸ ಮಾಡುವ ಮೂಲಕ, ವ್ಯಕ್ತಿಯು ಯಶಸ್ಸನ್ನು ಪಡೆಯುತ್ತಾನೆ. ಹಾಗಾದರೆ ಈ ದಿನದ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
ಜ್ಯೋತಿಷಿ ಪಂಡಿತ್ ನಾರಾಯಣ್ ಹರಿ ಶುಕ್ಲಾ ಹೇಳುವ ಪ್ರಕಾರ, ಸುಮಾರು 300 ವರ್ಷಗಳ ನಂತರ, ಈ ದಿನದಂದು ಬಹಳ ಅಪರೂಪದ ಯೋಗವೊಂದು ಘಟಿಸಲಿದೆ. ಇದರಿಂದಾಗಿ ಕೆಲವು ರಾಶಿಯ ಜನರು ಶಿವನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಹಾಗಾಗಿಯೇ 2024 ರ ಮಹಾಶಿವರಾತ್ರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಈ ದಿನ ಶುಕ್ರ ಪ್ರದೋಷ ವ್ರತವು ಬಂದಿರುವುದರಿಂದ ಶಿವನ ಆರಾಧಕರಿಗೆ ಇದೊಂದು ಅಪೂರ್ವ ಯೋಗ ಎಂದರೆ ತಪ್ಪಾಗಲಾರದು. ಪ್ರದೋಷ ವ್ರತದ ಹೊರತಾಗಿಯೂ ಈ ದಿನದಂದು ಇನ್ನೂ ಅನೇಕ ಅಪರೂಪದ ಯೋಗಗಳು ಕೂಡಿಬರಲಿದೆ. ಹಾಗಾಗಿ ಮಹಾಶಿವರಾತ್ರಿಯಂದು ಉಪವಾಸವನ್ನು ಆಚರಿಸಿದರೆ ಮತ್ತು ಭಗವಾನ್ ಶಿವನನ್ನು ಆರಾಧಿಸುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಅದರಲ್ಲಿಯೂ ವರ್ಷದಲ್ಲಿ ಬರುವ 12 ಶಿವರಾತ್ರಿಗಳಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದೆ.
300 ವರ್ಷಗಳ ನಂತರ ತ್ರಿಗ್ರಾಹಿ ಯೋಗ!
ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸುವ ಮೂಲಕ ಮತ್ತು ಸರ್ವಾರ್ಥ ಸಿದ್ಧಿಗಾಗಿ ಉಪವಾಸ ಮಾಡುವ ಮೂಲಕ, ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಈ ಬಾರಿ, 300 ವರ್ಷಗಳ ನಂತರ, ಮಹಾಶಿವರಾತ್ರಿಯಂದು ಈ ತ್ರಿಕೋನ ಯೋಗವು ಸಂಭವಿಸಲಿದೆ. ಈ ಅಪರೂಪದ ಯೋಗ ಮತ್ತು ಶುಭ ಸಂದರ್ಭದಲ್ಲಿ ಭಗವಾನ್ ಶಂಕರನನ್ನು ಪೂಜಿಸುವ ಮೂಲಕ, ಭಕ್ತರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಇನ್ನು, ಮಹಾಶಿವರಾತ್ರಿಯ ದಿನದಂದು ಶಿವಲಿಂಗವನ್ನು ಜೇನುತುಪ್ಪದಿಂದ ಅಭಿಷೇಕ ಮಾಡುವುದು ಕೂಡ ಮಂಗಳಕರವಾಗಿದೆ. ಜೊತೆಗೆ ಗಂಡ ಮತ್ತು ಹೆಂಡತಿ, ಶಿವನಿಗೆ ಕಬ್ಬಿನ ರಸದಿಂದ ಅಭಿಷೇಕ ಮಾಡುವುದರಿಂದ ಅಥವಾ ಒಟ್ಟಾಗಿ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಮತ್ತು ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಮಹಾಶಿವರಾತ್ರಿಯ ದಿನದಂದು, ಸುಮಾರು 300 ವರ್ಷಗಳ ನಂತರ ಇಂತಹ ಕಾಕತಾಳೀಯ ನಡೆಯುತ್ತಿದೆ. ಮಕರ ರಾಶಿಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗದಿಂದಾಗಿ ಚಂದ್ರ ಮಂಗಳ ಯೋಗವು ಮತ್ತು ಕುಂಭ ರಾಶಿಯಲ್ಲಿ ಶುಕ್ರ, ಶನಿ ಮತ್ತು ಸೂರ್ಯನ ಸಂಯೋಗ ಮತ್ತು ಮೀನ ರಾಶಿಯಲ್ಲಿ ರಾಹು ಮತ್ತು ಬುಧನ ಸಂಯೋಗದಿಂದಾಗಿ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಇಂತಹ ಕಾಕತಾಳೀಯವು ಎಲ್ಲಾ ರಾಶಿಯವರಿಗೂ ಕೂಡ ಒಳ್ಳೆಯದನ್ನು ಮಾಡುತ್ತದೆ ಜೊತೆಗೆ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ.