ನಾಭಿಗೆ ಈ ಎಣ್ಣೆ ಹಾಕುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹೊಟ್ಟೆ ನೋವು, ಮಲ ಬದ್ಧತೆ ಸಮಸ್ಯೆಯಾದಾಗ ನಾಭಿಗೆ ಎಣ್ಣೆ ಹಾಕುತ್ತಿದ್ದರು. ಆದರೆ ಇದರಿಂದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಈ ಎಣ್ಣೆಗಳನ್ನು ತಪ್ಪದೇ ಹೊಕ್ಕಳಿಗೆ ಹಾಕಿ.
*ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಹಾಗಾಗಿ ಈ ಎಣ್ಣೆಯನ್ನು ಬಿಸಿ ಮಾಡಿ ಹೊಕ್ಕಳಿಗೆ ಹಾಕುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ.
*ಹರಳೆಣ್ಣೆ : ಈ ಎಣ್ಣೆ ಚರ್ಮವನ್ನು ಮೃದುಗೊಳಿಸುವ ಮತ್ತು ಕೂದಲನ್ನು ವೇಗವಾಗಿ ಮತ್ತು ದಪ್ಪವಾಗಿ ಬೆಳೆಯಲು ಸಹಕರಿಸುತ್ತದೆ. ಹಾಗಾಗಿ ಹರಳೆಣ್ಣೆಯನ್ನು ಹೊಕ್ಕಳಿಗೆ ಹಾಕಿ.
*ಬಾದಾಮಿ ಎಣ್ಣೆ : ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ನೆತ್ತಿ ಮತ್ತು ಚರ್ಮವನ್ನು ತೇವಗೊಳಿಸುತ್ತದೆ. ಈ ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾದ ಮೇಲೆ ಹೊಕ್ಕಳಿಗೆ ಹಾಕಿ.
*ಸಾಸಿವೆ ಎಣ್ಣೆ : ತುಟಿಗಳು ಬಿರುಕು ಬಿಡುತ್ತಿದ್ದರೆ ಈ ಸಮಸ್ಯೆಯನ್ನು ನಿವಾರಿಸಲು ಸಾಸಿವೆ ಎಣ್ಣೆಯನ್ನು ನಿಮ್ಮ ನಾಭಿಗೆ ಹಾಕಿ.