ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್
ಮಧ್ಯಭಾಗದಲ್ಲಿರುವ ಒಳಾಂಗಗಳ ಕೊಬ್ಬು ಹೊಟ್ಟೆಯ ಕೊಬ್ಬಿಗೆ ಪ್ರಮುಖ ಕಾರಣವಾಗಿದೆ ಮತ್ತು ಇದು ತುಂಬಾ ಅಪಾಯಕಾರಿ ಕೂಡ. ಒಳಾಂಗಗಳ ಕೊಬ್ಬು ಹೊಟ್ಟೆಯಲ್ಲಿ ತುಂಬಾ ಆಳವಾಗಿ ಇರುವ ಕೊಬ್ಬು ಮತ್ತು ಚರ್ಮದ ಅಡಿಭಾಗದಲ್ಲಿ, ಕಿಡ್ನಿ ಮತ್ತು ಯಕೃತ್ ನಂತಹ ಕೆಲವೊಂದು ಮಹತ್ವದ ಅಂಗಾಂಗಗಳ ಸುತ್ತಲು ಆವರಿಸಿಕೊಂಡಿರುವುದು. ಹೊಟ್ಟೆ ಕೊಬ್ಬನ್ನ ಇಳಿಸು ವುದರಿಂದ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯಕ್ಕೂ ತುಂಬಾ ಒಳ್ಳೆಯದು. ಹೊಟ್ಟೆಯು ಸಮತಟ್ಟಾಗಿದ್ದರೆ ಆಗ ಇದು ಚರ್ಮದ ಸೌಂದರ್ಯ ವೃದ್ಧಿಸುವುದು. ಅದೇ ರೀತಿಯಾಗಿ ನಿಮಗೆ ಯಾವುದೇ ರೀತಿಯ ಬಟ್ಟೆ ಧರಿಸಬಹುದು ಮತ್ತು ಆತ್ಮವಿಶ್ವಾಸವನ್ನು ಕೂಡ ಇದು ಹೆಚ್ಚಿಸುವುದು. ಹೊಟ್ಟೆಯ ಕೊಬ್ಬು ಇಳಿಸುವ ಏಳು ವಿಧಾನಗಳ ಬಗ್ಗೆ ನೀವು ತಿಳಿಯಿರಿ
ಮೆಣಸು
ತುಂಬಾ ಖಾರವಾಗಿರುವಂಹತ ಮೆಣಸುಗಳು ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು ಮತ್ತು ಹಸಿವನ್ನು ಇದು ಕಡಿಮೆ ಮಾಡುವುದು. ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆ ವೃದ್ಧಿಸುವ ವಿಟಮಿನ್ ಸಿಯನ್ನು ಒದಗಿಸುವುದು.ಮೊಟ್ಟೆ
ಪ್ರೋಟೀನ್ ಹೊಂದಿರುವಂತಹ ಮೊಟ್ಟೆಯು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದಾಗಿ ನೀವು ಕಡಿಮೆ ತಿನ್ನುವಿರಿ ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಕರಗುವುದು. ಆರೋಗ್ಯಕಾರಿ ಪ್ರೋಟೀನ್ ಸೇವನೆಯಿಂದ ಕೊಬ್ಬು ಕರಗಿಸಿಕೊಳ್ಳಬಹುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.
ಬೀನ್ಸ್
ಹೊಟ್ಟೆಯ ಕೊಬ್ಬು ಕರಗಿಸುವ ವಿಚಾರಕ್ಕೆ ಬಂದರೆ ಆಗ ಮುಖ್ಯವಾಗಿ ಬೀನ್ಸ್ ಪ್ರಕೃತಿಯು ಮನುಷ್ಯನಿಗೆ ನೀಡಿರುವಂತಹ ಒಂದು ಉಡುಗೊರೆ ಎಂದು ಹೇಳಬಹುದು. ಇದು ಕಾರ್ಬ್ಸ್ ಮತ್ತು ಪ್ರೋಟೀನ್ ನ ಸಮತೋಲನ ಕಾಪಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆಯು ತುತುಂಬಿರುವಂತೆ ಮಾಡುವುದು. ಕಪ್ಪು ಬೀನ್ಸ್, ಕಿಡ್ನಿ ಬೀನ್ಸ್, ಮಸೂರ, ಗಾರ್ಬಾಂಜೊ ಮತ್ತು ಕ್ಯಾನೆಲ್ಲಿನಿ ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ.
ಬೀಜಗಳು
ಇದು ಹೊಟ್ಟೆಯು ತುಂಬಿರುವಂತೆ ಮಾಡುವುದು ಮಾತ್ರವಲ್ಲದೆ, ಆರೋಗ್ಯಕಾರಿ ಪ್ರೋಟೀನ್ ನೆರವಿನಿಂದಾಗಿ ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಮತ್ತು ಚಯಾಪಚಯ ಕ್ರಿಯೆ ವೃದ್ಧಿಸುವುದು. ಬಾದಾಮಿ, ಅಕ್ರೋಟ, ಗೋಂಡಬಿ, ಪಿಸ್ತಾ, ಚಿಯಾ ಬೀಜಗಳು ಇತ್ಯಾದಿಗಳು ಇದಕ್ಕೆ ಒಳ್ಳೆಯ ಉದಾಹರಣೆ