
ಬಹುತೇಕ ದುಬಾರಿ ಸಾಂಬಾರು ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ಕೂಡ ಒಂದು ಎಂದು ಹೇಳಬಹುದು. ಹೌದು ಬೆಲೆಯಲ್ಲಿ ತುಂಬಾನೇ ದುಬಾರಿಯಾಗಿರುವ ಈ ಏಲಕ್ಕಿ, ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹಲವಾರು ಬಾರಿ ಸಾಬೀತಾಗಿದೆ.
ಸಾಮಾನ್ಯವಾಗಿ ಇನ್ನು ಇದರ ಬಳಕೆ, ಹಬ್ಬ-ಹರಿದಿನಗಳ ಸಮಯದಲ್ಲಿ ಮನೆಯಲ್ಲಿ ಸಿಹಿ ತಿಂಡಿಗಳನ್ನು ಮಾಡು ವಾಗ, ಇಲ್ಲಾಂದ್ರೆ ಕೆಲವೊಂದು ವಿಶೇಷ ಅಡುಗೆಗಳಲ್ಲಿ ಬಳಕೆ ಮಾಡುತ್ತೇವೆ. ಇದರಿಂದ ನಾವು ತಯಾರಿಸಿದ ಅಡುಗೆಯ ಸುವಾಸನೆ ಹಾಗೂ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ, ಆರೋಗ್ಯ ಕೂಡ ವೃದ್ಧಿಯಾಗುವುದು....
ತೂಕ ಇಳಿಸುವಲ್ಲಿ ಏಲಕ್ಕಿಯ ಪಾತ್ರ

ದೇಹದ ತೂಕ ಇಳಿಸುವವರಿಗೂ ಕೂಡ ಸಹಾಯಕ್ಕೆ ಬರುತ್ತದೆ! ಬನ್ನಿ ಇಂದಿನ ಲೇಖನದಲ್ಲಿ ದೇಹದ ತೂಕ ಇಳಿಸುವಲ್ಲಿ ಏಲಕ್ಕಿಯ ಪಾತ್ರಗಳು ಏನು ಎನ್ನುವುದರ ಬಗ್ಗೆ ನೋಡೋಣ...
ಏಲಕ್ಕಿಯ ಪ್ರಯೋಜನಗಳನ್ನು ನೋಡುವುದಾದರೆ...

ಇಂತಹ ಸಮಸ್ಯೆಯನ್ನು ಈ ಪುಟ್ಟ ಏಲಕ್ಕಿ ಪರಿಹಾರ ಮಾಡುವಲ್ಲಿ ಅತ್ಯಂತ ಸುಲಭವಾಗಿ ಕೆಲಸ ಮಾಡುತ್ತದೆ. ಅದರಲ್ಲೂ ದೇಹದ ತೂಕ ಇಳಿಸುವ ವಿಷ್ಯದಲ್ಲಿ, ಏಲಕ್ಕಿ ಬಹಳ ಪರಿಣಾಮಕಾರಿ ಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿನಿತ್ಯವೂ ಏಲಕ್ಕಿ ನೆನೆಸಿಟ್ಟ ನೀರು ಕುಡಿಯುತ್ತಾ ಬಂದರೆ, ದೇಹದ ತೂಕ ಕಡಿಮೆ ಆಗುವುದು ಮಾತ್ರವಲ್ಲದೆ, ಬೊಜ್ಜು ಕೂಡ ನಿಯಂತ್ರಣಕ್ಕೆ ಬರುವುದು
ಮೆಲಟೊನಿನ್ ಎನ್ನುವ ಅಂಶ

ಪ್ರಮುಖವಾಗಿ ಈ ಪುಟ್ಟ ಏಲಕ್ಕಿಯಲ್ಲಿ ಮೆಲಟೊನಿನ್ ಎನ್ನುವ ನೈಸರ್ಗಿಕ ಅಂಶ ಕಂಡುಬರುತ್ತದೆ. ಇದು ದೇಹದಲ್ಲಿ ಸಂಗ್ರಹಣೆಗೊಂಡಿರುವ ಕೆಟ್ಟ ಕೊಬ್ಬಿನಾಂಶ ವನ್ನು ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಜೊತೆಗೆ, ದೇಹದ ತೂಕ ಕೂಡ ಇಳಿಸುವಂತೆ ಮಾಡುವುದು.
ಕೊಬ್ಬು ಕರಗಿಸುವಲ್ಲಿ

ಈ ಬಗ್ಗೆ ಅಧ್ಯಾಯನ ನಡೆಸಿದ ಸಂಶೋಧಕರು, ಏಲಕ್ಕಿಯಲ್ಲಿ ಸಿಗುವ ಇಂತಹ ಅಪರೂಪದ ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದರು. ಇನ್ನೂ ಸಂತಸದ ಸುದ್ದಿ ಏನೆಂದರೆ, ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವುದರಿಂದ, ಯಾವುದೇ ಬಗೆಯ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಹಾಗಾದ್ರೆ ಏಲಕ್ಕಿಯನ್ನು ಹೇಗೆ ಸೇವನೆ ಮಾಡಬೇಕು

ಮರುದಿನ ಬೆಳಗ್ಗೆ ಎದ್ದ ಕೂಡಲೇ, ಈ ನೀರನ್ನು ಸೋಸಿ ಕೊಂಡು, ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಇದರ ಜೊತೆಗೆ ಪ್ರತಿದಿನವೂ ಆರೋಗ್ಯಕರವಾದ ಆಹಾರ ಪದ್ಧತಿ, ವ್ಯಾಯಾಮ, ಯೋಗಾಭ್ಯಾಸಗಳು, ಸರಿಯಾದ ಆಹಾರ ಕ್ರಮ ಅನುಸರಿಸಿಕೊಂಡು ಹೋದರೆ ಆಗ ಖಂಡಿತವಾಗಿ ಯೂ ತೂಕ ಇಳಿಸಿಕೊಳ್ಳಲು ಸಹಾಯ ವಾಗುವುದು