Clove Benefits
Health Tips : ಪ್ರತಿದಿನ ರಾತ್ರಿ 2 ಲವಂಗ ಸೇವಿಸಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ ಗೋತ್ತಾ?
ಪ್ರತಿ ದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಲವಂಗದಲ್ಲಿ ಔಷಧಿ ಗುಣಗಳಿರುವುದರಿಂದ ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ. ಇಂದು ನಾವು ಲವಂಗ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಮಾಹಿತಿ ತಂದಿದ್ದೇವೆ..
ಲವಂಗದಲ್ಲಿದೆ ಔಷಧಿ ಗುಣ
ಲವಂಗದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಅಲ್ಲದೆ, ಲವಂಗವು ರೋಗನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದರಿಂದಾಗಿ ಲವಂಗವು ದೇಹದ ಅನೇಕ ರೋಗಗಳನ್ನು ಬುಡದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.ರಾತ್ರಿಯಲ್ಲಿ ಲವಂಗವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು?
ಲವಂಗ ತಿನ್ನಲು ಸರಿಯಾದ ಸಮಯ ಯಾವುದು ಎಂದು ನಿಮಗೆ ತಿಳಿದಿದರೆ ಒಳ್ಳೆಯದು, ಯಾವ ಸಮಯದಲ್ಲಿ ಬೇಕಾದ್ರು ಲವಂಗವನ್ನು ಬಳಸುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ಆದರೆ, ರಾತ್ರಿ ಬಳಕೆ ಮಾಡುವುದು ಬಹಳ ಪರಿಣಾಮಕಾರಿಯಾಗಿರುತ್ತದೆ. ರಾತ್ರಿ ಮಲಗುವ ಮೊದಲು ನೀವು 2 ಲವಂಗವನ್ನು ತಿಂದು ನಂತರ 1 ಗ್ಲಾಸ್ ಬಿಸಿನೀರನ್ನು ಕುಡಿಯಿರಿ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉರಿತ, ಕೀಲು ನೋವು ಮುಂತಾದ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಲವಂಗ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳ
- ರಾತ್ರಿ ಮಲಗುವ ಮುನ್ನ ಲವಂಗವನ್ನು ತಿನ್ನುವುದು ಮತ್ತು ಬೆಚ್ಚಗಿನ ನೀರು ಕುಡಿಯುವುದು ಮಲಬದ್ಧತೆ, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ಹಲ್ಲು ನೋವು ಅಥವಾ ಹಲ್ಲಿನಲ್ಲಿ ಹುಳುಗಳ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಸರಿಯಾಗಿ ಅಗಿಯಿರಿ ಮತ್ತು ನಂತರ 1 ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ.
- ಲವಂಗವನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ತಲೆನೋವು ನಿವಾರಣೆಗೆ ಸಹಾಯ ಮಾಡುತ್ತದೆ, ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೂ ಲವಂಗ ನಿಮಗೆ ಪ್ರಯೋಜನಕಾರಿಯಾಗುತ್ತದೆ.
- ರಾತ್ರಿ ಮಲಗುವ ಮುನ್ನ 2 ಲವಂಗವನ್ನು ತಿನ್ನಿರಿ ಮತ್ತು ಅದರ ನಂತರ 1 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಉದಾಹರಣೆಗೆ - ಗಂಟಲು ಸಮಸ್ಯೆ, ಗಂಟಲು ನೋವು, ಗಂಟಲಲ್ಲಿ ಕಫ, ಲವಂಗ ಕೂಡ ಈ ಎಲ್ಲ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ.
ಲವಂಗದ ಕಷಾಯ : ಲವಂಗವು ಖಾರವಾಗಿರುವ ಕಾರಣ ಅಗಿಯುವುದು ಅಥವಾ ತಿನ್ನಲು ನಿಮಗೆ ಕಷ್ಟವಾದರೆ, ಲವಂಗವನ್ನ ಚೆನ್ನಾಗಿ ಪುಡಿಮಾಡಿ ಅದನ್ನ 1 ಲೋಟ ನೀರಿನಲ್ಲಿ 2-3 ನಿಮಿಷ ಕುದಿಸಿ ನಂತರ ಹಾರಿಸಿ ಕುಡಿಯಿರಿ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ಸಹ ನೀವು ಪಡೆಯಬಹುದು. ಮಕ್ಕಳಿಗೆ ಮಲಬದ್ಧತೆ ಅಥವಾ ಶೀತ ಕೆಮ್ಮು ಸಮಸ್ಯೆ ಇದ್ದರೆ, 1 ಲವಂಗವನ್ನು ಚೆನ್ನಾಗಿ ಪುಡಿಮಾಡಿ ಅರ್ಧ ಟೀ ಚಮಚ ಜೇನುತುಪ್ಪದಲ್ಲಿ ಹಾಕಿ ಮಕ್ಕಳಿಗೆ ಕೊಡಿ.