ಈ ಆಹಾರಗಳನ್ನು ಸೇವಿಸುವ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡಿದರೆ, ಆಗ ಖಂಡಿತವಾಗಿಯೂ ದೇಹದ ತ್ರಾಣವನ್ನು ಕಾಪಾಡಿಕೊಳ್ಳಬಹುದು.


ದೇಹದ ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಆಹಾರ ಪಥ್ಯ, ವ್ಯಾಯಾಮ ಮಾಡಿಕೊಂಡ ವೇಳೆ ಕೆಲವರ ದೇಹದಲ್ಲಿ ಶಕ್ತಿಯೇ ಇಲ್ಲದಂತಾಗುತ್ತದೆ. ಇದಕ್ಕಾಗಿಯೇ ಕೆಲವರು ಇದನ್ನು ಅರ್ಧದಲ್ಲೇ ಬಿಟ್ಟು ಮತ್ತೆ ಹಿಂದಿನ ದಿನಚರಿಯನ್ನು ಪಾಲಿಸುವರು. ಹೀಗಾಗಿ ದೇಹ ತೂಕ ಇಳಿಸುವ ಸಂದರ್ಭದಲ್ಲಿ ಪಾಲಿಸುವ ಆಹಾರ ಕ್ರಮದಲ್ಲಿ ದೇಹದ ತ್ರಾಣವನ್ನು ಕಾಪಾಡಬೇಕು. ದೇಹದಲ್ಲಿ ಶಕ್ತಿಯಿದ್ದರೆ ಆಗ ಇನ್ನಷ್ಟು ಕಠಿಣ ವ್ಯಾಯಾಮಗಳನ್ನು ಮಾಡಬಹುದು.
ಕೆಲವು ಆಹಾರಗಳು ದೇಹಕ್ಕೆ ಶಕ್ತಿ ನೀಡುವ ಜತೆಗೆ ತ್ರಾಣ ಒದಗಿಸುವುದು. ಅದರಲ್ಲೂ ಕೆಲವು ಆಹಾರಗಳು ಗಣನೀಯವಾಗಿ ದೇಹದಲ್ಲಿ ತ್ರಾಣ ಹೆಚ್ಚಿಸುವುದು. ಸಮ ತೋಲಿತ, ಪೋಷಕಾಂಶಗಳು ಇರುವ ಆಹಾರಗಳಾಗಿರುವಂತಹ ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಲೀನ್ ಪ್ರೋಟೀನ್ ಮತ್ತು ಆರೋಗ್ಯಕಾರಿ ಕೊಬ್ಬು ಇರುವ ಆಹಾರ ಸೇವನೆ ಮಾಡಿದರೆ, ಆಗ ಇದರಿಂದ ಶಕ್ತಿಯ ಮಟ್ಟ ಹೆಚ್ಚಾಗುವುದು ಮತ್ತು ಫಿಟ್ನೆಸ್ ಕಾಪಾಡಬಹುದು. ದೇಹಕ್ಕೆ ತ್ರಾಣ ನೀಡುವ ಹತ್ತು ಆಹಾರಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ಬಾಳೆಹಣ್ಣು

ಕಾರ್ಬೋಹೈಡ್ರೇಟ್ಸ್, ನೈಸರ್ಗಿಕ ಸಕ್ಕರೆ ಮತ್ತು ಪೊಟಾಶಿಯಂ ಅಂಶವು ಬಾಳೆಹಣ್ಣಿನಲ್ಲಿ ಸಮೃದ್ಧವಾಗಿದೆ. ಇದು ಹಠಾತ್ ಮತ್ತು ಶಕ್ತಿಯನ್ನು ಉಳಿಸುವುದು. ಇದರಿಂದ ದೇಹದ ತ್ರಾಣಕ್ಕೆ ಇದು ಒಳ್ಳೆಯ ಆಯ್ಕೆ ಯಾಗಿದೆ. ಉಪಾಹಾರದಲ್ಲಿ ಇದನ್ನು ಬಳಸಬಹುದು ಅಥವಾ ಸ್ಮೂಥಿ ಯಲ್ಲಿ ಕೂಡ ಇದನ್ನು ಬಳಕೆ ಮಾಡಬಹುದು.
ಓಟ್ಸ್

ಓಟ್ಸ್ ನಲ್ಲಿ ಅಧಿಕ ಮಟ್ಟದ ನಾರಿನಾಂಶ, ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಮತ್ತು ವಿಟಮಿನ್ ಬಿ ಅಂಶವಿದ್ದು, ಇದು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವುದು. ಇದು ನಿಧಾನ ಮತ್ತು ಸ್ಥಿರವಾದ ಶಕ್ತಿ ಒದಗಿಸುವುದು. ಇದರಿಂದ ತ್ರಾಣ ಹೆಚ್ಚಾಗುವುದು. ಒಂದು ಪಿಂಗಾಣಿ ಓಟ್ಸ್ ಸೇವನೆ ಮಾಡಿದರೆ ಒಳ್ಳೆಯದು. ಇದನ್ನು ಸ್ಮೂಥಿ ಅಥವಾ ಬೇಕ್ ಮಾಡಿದ ಆಹಾರಕ್ಕೆ ಕೂಡ ಸೇರಿಸಿಕೊಳ್ಳಬಹುದು.
ಕ್ವಿನೋವಾ

ಕ್ವಿನೋವಾದಲ್ಲಿ ಸಂಪೂರ್ಣ ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋ ಹೈಡ್ರೇಟ್ಸ್, ನಾರಿನಾಂಶ ಮತ್ತು ಖನಿಜಾಂಶಗಳಾಗಿರುವ ಮೆಗ್ನಿಶಿಯಂ ಮತ್ತು ಕಬ್ಬಿಣಾಂಶವು ಇದೆ. ಇದು ಶಕ್ತಿ ಕಾಪಾಡುವುದು. ಕ್ವಿನೋವಾ ವನ್ನು ಸಲಾಡ್, ಸೂಪ್ ಮತ್ತು ಸ್ಟೂಗಳಲ್ಲಿ ಬಳಕೆ ಮಾಡಬಹುದು.
ಚಿಯಾ ಬೀಜಗಳು

ಚಿಯಾ ಬೀಜವು ಆರೋಗ್ಯಕಾರಿ ಕೊಬ್ಬು, ಪ್ರೋಟೀನ್, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದರಿಂದ ದೀರ್ಘ ಕಾಲದ ಶಕ್ತಿ, ಹೈಡ್ರೇಶನ್ ಸುಧಾರಣೆ ಮತ್ತು ಉರಿಯೂತ ಕಡಿಮೆ ಆಗುವುದು. ಚಿಯಾ ಬೀಜಗಳನ್ನು ಯೋಗರ್ಟ್, ಓಟ್ ಮೀಲ್ ಅಥವಾ ಸ್ಮೂಥಿಗೆ ಬಳಸಬಹುದು.
ಬಾದಾಮಿ

ಬಾದಾಮಿಯಲ್ಲಿ ಆರೋಗ್ಯಕಾರಿ ಕೊಬ್ಬು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದರಿಂದ ಶಕ್ತಿಯು ಸ್ಥಿರವಾಗಿ ಇರುವುದು ಮತ್ತು ಸಂಪೂರ್ಣ ತ್ರಾಣವು ಸುಧಾರಣೆ ಆಗುವುದು. ಒಂದು ಹಿಡಿ ಬಾದಾಮಿ ಯನ್ನು ಸಲಾಡ್ ನಲ್ಲಿ ಬಳಸಿ ಅಥವಾ ಬಾದಾಮಿ ಬೆಣ್ಣೆಯನ್ನು ಕೂಡ ಬಳಸಬಹುದು.
ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ಅಧಿಕ ಮಟ್ಟದ ಕಬ್ಬಿಣಾಂಶ, ಮೆಗ್ನಿಶಿಯಂ ಮತ್ತು ಪ್ರಮುಖ ವಿಟಮಿನ್ ಗಳು ಇವೆ. ಇದು ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಿಸುವುದು, ಆಮ್ಲಜನಕ ಸರಬರಾಜನ್ನು ಸುಧಾರಣೆ ಮಾಡುವುದು ಮತ್ತು ಶಕ್ತಿಯನ್ನು ವೃದ್ಧಿಸುವುದು. ಪಾಲಕ್ ಸೊಪ್ಪನ್ನು ಪಲ್ಯ, ಸ್ಯಾಂಡ್ವಿಚ್, ಫ್ರೈ ಮತ್ತು ಸ್ಮೂಥಿಗಳಲ್ಲಿ ಬಳಸಬಹುದು.
ಬೀಟ್‌ರೂಟ್

ಬೀಟ್‌ರೂಟ್ ನಲ್ಲಿ ನೈಟ್ರೇಟ್ ಅಂಶವು ಅತ್ಯಧಿಕ ಮಟ್ಟದಲ್ಲಿ ಇದ್ದು, ಇದು ರಕ್ತ ಸಂಚಾರವನ್ನು ಸುಧಾರಣೆ ಮಾಡುವುದು ಮತ್ತು ಇದರಿಂದ ತ್ರಾಣ ಮತ್ತು ವ್ಯಾಯಾಮದ ಪ್ರದರ್ಶನವು ಸುಧಾರಣೆ ಆಗುವುದು. ಬೀಟ್ ರೂಟ್ ಜ್ಯೂಸ್ ಕುಡಿಯಿರಿ ಅಥವಾ ಈ ತರಕಾರಿಯ ಪಲ್ಯ ಸಾಂಬಾರು ಮಾಡಿ ಕೂಡ ಸೇವನೆ ಮಾಡಬಹುದು.
ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್ ಮತ್ತು ನೈಸರ್ಗಿಕ ಸಕ್ಕರೆಯು ಇದೆ. ಇದು ಶಕ್ತಿ ಮಟ್ಟ ವೃದ್ಧಿಸುವುದು, ಬಳಲಿಕೆ ತಡೆಯು ವುದು ಮತ್ತು ತ್ರಾಣ ವೃದ್ಧಿಸುವುದು. ಕಿತ್ತಳೆಯನ್ನು ಹಾಗೆ ಸೇವನೆ ಮಾಡಬಹುದು ಅಥವಾ ಇದರ ಜ್ಯೂಸ್ ಮಾಡಿಕೊಂಡು ಸೇವಿಸಬಹುದು.
ಲೀನ್ ಪ್ರೋಟೀನ್

ಲೀನ್ ಪ್ರೋಟೀನ್ ಇರುವ ಮಾಂಸ, ಮೊಟ್ಟೆ, ಮೀನು ಮತ್ತು ತೌಫು ಸ್ನಾಯುಗಳನ್ನು ಸರಿಪಡಿಸಲು ಮತ್ತು ಶಕ್ತಿ ಉತ್ಪಾದಿಸಲು ಬೇಕಾಗಿರುವ ಅಮಿನೋ ಆಮ್ಲವನ್ನು ದೇಹಕ್ಕೆ ಒದಗಿಸುವುದು. ಲೀನ್ ಪ್ರೋಟೀನ್ ನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಆಗ ಇದರಿಂದ ತ್ರಾಣ ಸುಧಾರಣೆ ಆಗುವುದು ಮತ್ತು ವ್ಯಾಯಾಮ ಮಾಡಲು ಶಕ್ತಿ ಸಿಗುವುದು.
ಗ್ರೀನ್ ಟೀ

ಈ ಎಲ್ಲಾ ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಇದರ ಜತೆಗೆ ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ, ಒತ್ತಡ ನಿರ್ವಹಣೆ ಮತ್ತು ಸಂಪೂರ್ಣ ಆರೋಗ್ಯಕಾರಿ ಜೀವನಶೈಲಿಯು ತ್ರಾಣ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸು ವುದು.