ಕೇವಲ 30 ದಿನಗಳ ಕಾಲ ಮೆಂತೆ ಕಾಳು ನೆನೆಸಿದ ನೀರು ಕುಡಿದರೆ ಏನೆಲ್ಲಾ ಪ್ರಯೋಜನಗಳಿವೆ ಗ...


ಖಾಲಿ ಹೊಟ್ಟೆಗೆ ಮೆಂತೆಕಾಳು ನೆನೆಸಿದ ನೀರು ಕುಡಿದ್ರೆ, ಆರೋಗ್ಯಕ್ಕೆ ಹತ್ತಾರು ಲಾಭ!

ಮೆಂತೆ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಇದನ್ನು ನೀರಿನಲ್ಲಿ ನೆನೆಸಿ ಅದರ ನೀರು ಕುಡಿದರೆ ಸಿಗುವ ಲಾಭಗಳ ಬಗ್ಗೆ ಓದಿಕೊಳ್ಳಿ.

benefits of drinking fenugreek seeds soaked in water on an empty stomach
ಖಾಲಿ ಹೊಟ್ಟೆಗೆ ಮೆಂತೆಕಾಳು ನೆನೆಸಿದ ನೀರು ಕುಡಿದ್ರೆ, ಆರೋಗ್ಯಕ್ಕೆ ಹತ್ತಾರು ಲಾಭ!
ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳು ಹಾಗೂ ನಾವು ಬಳಸುವಂತಹ ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಆಯುರ್ವೇದವು ಹಲವಾರು ವಿಧದ ಔಷಧಿಗಳನ್ನು ತಯಾರಿಸುತ್ತದೆ ಮತ್ತು ಇದು ತುಂಬಾ ಪರಿಣಾಮಕಾರಿ ಹಾಗೂ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದು. ಆಯುರ್ವೇದದಲ್ಲಿ ಸೂಚಿಸಿರುವಂತಹ ಕೆಲವೊಂದು ವಿಧಾನಗಳನ್ನು ನಾವು ಪಾಲಿಸಿಕೊಂಡು ಹೋದರೆ ಅದು ನಮಗೆ ದಿನನಿತ್ಯದಲ್ಲಿ ಆರೋಗ್ಯ ಕಾಪಾಡಲು ತುಂಬಾ ನೆರವಾಗಲಿದೆ.

ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ರಾತ್ರಿ ವೇಳೆ ನೆನೆಸಿಟ್ಟು ಅದರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎಷ್ಟು ಲಾಭವಾಗಲಿದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ. ಅದೇ ರೀತಿ ಈಗ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟುಕೊಂಡು ಅದನ್ನು ಕುಡಿದರೆ ಎಷ್ಟು ಲಾಭವಾಗುವುದು ಎಂದು ನಾವು ತಿಳಿಯಲಿದ್ದೇವೆ...

ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇವೆ. ಇದು ದೇಹದ ಆರೋಗ್ಯವನ್ನು ಕಾಪಾಡುವ ಜತೆಗೆ ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು.

ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಚಯಾಪಚಯಕ್ಕೆ ಇದು ತುಂಬಾ ಒಳ್ಳೆಯದು. ಮೆಂತ್ಯೆಕಾಳಿನ ನೀರಿನಿಂದ ಅದ್ಭುತ ಲಾಭಗಳು ಇವೆ. ಇದನ್ನು ನೀವು ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಮ್ಮ ಆಹಾರ ಕ್ರಮದಲ್ಲಿ ಮೊದಲಿಗೆ ಮೆಂತ್ಯೆ ನೀರನ್ನು ಕುಡಿದರೆ ಅದರಿಂದ ಯಾವ ಲಾಭಗಳು ಆಗಲಿದೆ ಎಂದು ತಿಳಿಯಿರಿ.

ಕಫ ಇರುವ ಜನರಿಗೆ ತುಂಬಾ ಒಳ್ಳೆಯದು

ಕಫ ಇರುವ ಜನರಿಗೆ ತುಂಬಾ ಒಳ್ಳೆಯದು

ಕಫ ಹೆಚ್ಚಾಗಿ ಇರುವಂತಹ ಜನರ ದೇಹದಲ್ಲಿ ಉಷ್ಣತೆ(ಅಗ್ನಿ)ಯು ಕಡಿಮೆ ಇರುವುದು ಎಂದು ಆಯುರ್ವೇದವು ಹೇಳುತ್ತದೆ.

ಕಫ ಇರುವ ವ್ಯಕ್ತಿಗಳಲ್ಲಿ ಪ್ರತಿರೋಧಕ ಶಕ್ತಿಯು ಕಡಿಮೆ ಇರುವುದು ಮತ್ತು ಇದರಿಂದ ಶೀತ, ಕೆಮ್ಮು ಮತ್ತು ಜ್ವರ ಬರುವುದು. ಮೆಂತ್ಯೆ ನೀರು ಕುಡಿದರೆ ಅದು ದೇಹಕ್ಕೆ ಉಷ್ಣತೆ ನೀಡುವುದು ಹಾಗೂ ದೇಹದ ಪ್ರತಿರೋಧಕ ಶಕ್ತಿ ಕೂಡ ವೃದ್ಧಿಸುವುದು.

ಬಾಣಂತಿಯರಿಗೆ

ಬಾಣಂತಿಯರಿಗೆ

ಮೆಂತ್ಯೆ ನೀರು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಮೆಂತ್ಯೆ ಕಾಳನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಅದರಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.

ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮೆಂತ್ಯೆ ಕಾಳು ತುಂಬಾ ಲಾಭಕಾರಿ. ಇದರಿಂದಾಗಿ ಬಾಣಂತಿಯರಿಗೆ ಮೆಂತ್ಯೆ ಕಾಳಿನಿಂದ ತಯಾರಿಸಿದ ಲಾಡು ನೀಡಲಾಗುತ್ತದೆ.

ಮೆಂತ್ಯೆಯಲ್ಲಿರುವಂತಹ ಕೆಲವೊಂದು ಅಂಶಗಳು ಗರ್ಭಕೋಶವನ್ನು ಮೊದಲಿನ ಸ್ಥಿತಿಗೆ ತರಲು ನೆರವಾಗುವುದು. ಇದರಿಂದ ಮೆಂತ್ಯೆ ನೀರನ್ನು ಬಳಸಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು

ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು

ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಮೆಂತ್ಯೆ ಕಾಳು ತುಂಬಾ ಪರಿಣಾಮಕಾರಿ ಆಗಿರುವುದು. ಇದು ಇನ್ಸುಲಿನ್ ಪ್ರತಿರೋಧಕವನ್ನು ಸರಿಪಡಿಸುವುದು ಮತ್ತು ಹೆಚ್ಚು ಸೂಕ್ಷ್ಮ ಮತ್ತು ಪ್ರತಿಕ್ರಿಯಾತ್ಮಕ ವಾಗಿಸುವುದು. ಹೀಗಾಗಿ ಇದನ್ನು ಮಧುಮೇಹಿಗಳು ಬಳಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ತೂಕ ಇಳಿಸಲು

ತೂಕ ಇಳಿಸಲು

ಮೆಂತ್ಯೆ ಕಾಳಿನ ನೀರನ್ನು ನಿತ್ಯವೂ ಕುಡಿದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗುವುದು. ಇದು ಚಯಾಪಚಯಕ್ಕೆ ವೇಗ ನೀಡುವುದು. ಇದು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು ಮತ್ತು ತೂಕ ಇಳಿಸಲು ಮತ್ತು ನಿರ್ವಹಿಸಲು ಸಹಕರಿಸುವುದು. ತೂಕ ಇಳಿಸಲು ಬಯಸಿದ್ದರೆ ಆಗ ನೀವು ಮೆಂತ್ಯೆ ಕಾಳನ್ನು ಬಳಸಿ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಮೆಂತ್ಯೆ ಕಾಳು ಆಮ್ಲ ವಿರೋಧಿಯಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಬಲ ಬರುವುದು ಮತ್ತು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆಯು ಕಡಿಮೆ ಆಗುವುದು. ಇದನ್ನು ಶೀತ ತಿಂಗಳುಗಳಲ್ಲಿ ತಿಂದರೆ ಒಳ್ಳೆಯದು ಎಂದು ಆಯುರ್ವೇದ ಮತ್ತು ಯೋಗ ತಜ್ಞ ಯೋಗಾಚಾರ್ಯ ಅನೂಪ್ ಅವರು ಸಲಹೆ ನೀಡುತ್ತಾರೆ.

ಇತರ ಲಾಭಗಳು
ಮೆಂತ್ಯೆ ಕಾಳಿನ ನೀರು ದೇಹದಲ್ಲಿ ದ್ರವಾಂಶ ನಿಲ್ಲುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಇದೆ ಮತ್ತು ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅದರಿಂದ ದೇಹವು ಆರಾಮವಾಗಿರಲು ನೆರವಾಗುವುದು.

ಗಮನಿಸಬೇಕಾದ ಅಂಶಗಳು
ಒಂದು ಕಪ್ ನೀರಿಗೆ ಒಂದು ಚಮಚ ಮೆಂತ್ಯೆ ಕಾಳು ಹಾಕಿ ಅದರ ನೀರು ಕುಡಿದರೆ ತುಂಬಾ ಒಳ್ಳೆಯದು. ಕರುಳಿನ ಅಲ್ಸರ್ ಇರುವವರು ಇದನ್ನು ಸೇವಿಸಬಾರದು. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಚರ್ಮವು ಒಣಗುವ ಸಮಸ್ಯೆಯು ಕಾಡುವುದು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...