ಗರಿಕೆಯನ್ನು ಅನೇಕ ಧಾರ್ಮಿಕ ಪೂಜೆ ವಿಧಿ ವಿಧಾನಗಳಲ್ಲಿ ಬಳಸುತ್ತಾರೆ. ಗರಿಕೆಯು ಪೋಷಕಾಂಶ ಸಮೃದ್ಧವಾಗಿದೆ. ಗರಿಕೆಯು ಆಯುರ್ವೇದ ಔಷಧದಲ್ಲಿ ಸಾಂಪ್ರದಾಯಿಕ ಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ. ಗರಿಕೆಯಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.

ದೂರ್ವೆ ಹುಲ್ಲಿನ ಬಗ್ಗೆ ನಿಮಗೆ ಗೊತ್ತಿದೆ. ಇದನ್ನು ಹೆಚ್ಚಾಗಿ ಜನರು ದೇವರ ಪೂಜೆಗೆ ಬಳಸುತ್ತಾರೆ. ಗಣೇಶ ದೇವರಿಗೆ ಅರ್ಪಿಸಲು ಬಳಸುತ್ತಾರೆ. ಯಾರು ಗಣಪತಿಯ ಪೂಜೆ, ಭಕ್ತಿಯ ಆಚರಣೆ ಮಾಡುತ್ತಾರೋ ಅವರಿಗೆ ದೂರ್ವೆಯ ಮಹತ್ವ ಗೊತ್ತಿದೆ. ಇದನ್ನು ಗರಿಕೆ ಎಂದು ಕರೆಯುತ್ತಾರೆ. ಈ ಗರಿಕೆಯು ದೇವರಿಗೆ ಹಾಗೂ ಆರೋಗ್ಯಕ್ಕೆ ಶ್ರೇಷ್ಠವಾಗಿದೆ. ಗರಿಕೆಯ ರಸ ಕುಡಿದರೆ ಆರೋಗ್ಯ ವರ್ಧಕ ಎಂದು ಹೇಳಲಾಗುತ್ತದೆ.
ಗರಿಕೆಯನ್ನು ಅನೇಕ ಧಾರ್ಮಿಕ ಪೂಜೆ ವಿಧಿ ವಿಧಾನಗಳಲ್ಲಿ ಬಳಸುತ್ತಾರೆ. ಗರಿಕೆಯು ಪೋಷಕಾಂಶ ಸಮೃದ್ಧವಾಗಿದೆ. ಗರಿಕೆಯು ಆಯುರ್ವೇದ ಔಷಧದಲ್ಲಿ ಸಾಂಪ್ರದಾಯಿಕ ಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ. ಗರಿಕೆಯಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.
ಗರಿಕೆಯಲ್ಲಿ ಹಲವು ಔಷಧೀಯ ಗುಣಗಳಿವೆ. ಗರಿಕೆ ಒಂದು ತಂಪುಗೊಳಿಸುವ ಮೂಲಿಕೆ ಆಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಅನೇಕ ಚರ್ಮದ ಸಮಸ್ಯೆ ನಿವಾರಣೆಗೆ ಗರಿಕೆ ಸಹಾಯ ಮಾಡುತ್ತದೆ. ಸನ್ಬರ್ನ್ ಮತ್ತು ಶಾಖದಲ್ಲಿ ಶ್ರೀಗಂಧದ ಪುಡಿ ಜೊತೆ ಗರಿಕೆ ರಸದ ಲೇಪನ ಮಾಡುವುದು ಪ್ರಯೋಜನಕಾರಿಯಾಗಿದೆ.
ಗರಿಕೆಯಲ್ಲಿ ಸೈನೊಡಾನ್ ಡ್ಯಾಕ್ಟಿಲೋನ್ ಎಂಬ ಜೀವರಾಸಾಯನಿಕ ಸಂಯುಕ್ತ ಇದೆ. ಇದು ಹೈಪೊಗ್ಲಿಸಿಮಿಕ್ ಪರಿಣಾಮ ಹೊಂದಿದೆ. ಮತ್ತು ಮಧುಮೇಹ ಮತ್ತು ಪಿಸಿಓಎಸ್ ನಲ್ಲಿ ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಪ್ರತಿರೋಧ ನಿಯಂತ್ರಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಗರ್ಭಾಶಯದ ರಕ್ತಸ್ರಾವ, ರಕ್ತಸಿಕ್ತ ಪೈಲ್ಸ್, ಹೆಮರಾಜಿಕ್ ಅತಿಸಾರ ಕಡಿಮೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಗರಿಕೆಯಲ್ಲಿರುವ ಸೈನೊಡಾನ್ ಡ್ಯಾಕ್ಟಿಲಾನ್ ಜೈವಿಕ ರಾಸಾಯನಿಕ ಪದಾರ್ಥಗಳು ದೇಹದ ಆರೋಗ್ಯ ಕಾಪಾಡುತ್ತವೆ. ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಗರಿಕೆಯು ಅತ್ಯಂತ ಅಗ್ಗದ ಮತ್ತು ಬಾಳಿಕೆ ಬರುವ ರೋಗ ನಿರೋಧಕ ಶಕ್ತಿ ಬೂಸ್ಟರ್ ಎಂದೇ ಕರೆಯಲಾಗುತ್ತದೆ.
ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಪರಿಣಾಮ ಹೊಂದಿದೆ ಗರಿಕೆ. ಕೆಲವು ಬೇವಿನ ಎಲೆಯ ಜೊತೆ ಗರಿಕೆ ಮಿಕ್ಸ್ ಮಾಡಿ, ರಸ ತೆಗೆದು ಸೇವಿಸಿದರೆ ಮಧುಮೇಹ ಸಂಬಂಧಿ ಸಮಸ್ಯೆ ತಡೆಗೆ ಹೋರಾಡಲು ಇದು ಸಹಾಯ ಮಾಡುತ್ತದೆ. ರಕ್ತದ ಸಕ್ಕರೆ ಏರಿಕೆ ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ದುರ್ವೆ ರಸ ಸೇವಿಸಬಹುದು.
ಗರಿಕೆ ರಸ ಸೇವನೆಯು ಋತುಚಕ್ರವನ್ನು ದೀರ್ಘಕಾಲದವರೆಗೆ ನಿಯಂತ್ರಿಸುತ್ತದೆ. ಭಾರೀ ರಕ್ತಸ್ರಾವ ನಿಯಂತ್ರಿಸಲು ಮತ್ತು ಪಿಸಿಓಎಸ್ ಗುಣಪಡಿಸಲು ಪ್ರಬಲವಾದ ಗಿಡಮೂಲಿಕೆ ಮತ್ತು ಪರಿಹಾರವಾಗಿದೆ. ಇದು ನೈಸರ್ಗಿಕ ಮೂತ್ರವರ್ಧಕ. ಇದು ಮೂತ್ರನಾಳದ ಸೋಂಕಿನ ಚಿಕಿತ್ಸೆಗೆ ಸಹಕಾರಿ. ಅಸಿಡಿಟಿ ಮತ್ತು ಮೂತ್ರದಲ್ಲಿ ಸುಡುವ ಸಂವೇದನೆ ಕಡಿಮೆ ಮಾಡುತ್ತದೆ.
ಚರ್ಮದ ಆರೋಗ್ಯ ಕಾಪಾಡುತ್ತದೆ. ಎಸ್ಜಿಮಾ, ಸೋರಿಯಾಸಿಸ್, ಗಾಯ ಮತ್ತು ಶಿಲೀಂಧ್ರ ಸೋಂಕು ಸೇರಿ ಹಲವು ಚರ್ಮ ರೋಗಗಳ ಸಮಸ್ಯೆ ತೊಡೆದು ಹಾಕಲು ಪ್ರಯೋಜನಕಾರಿಯಾಗಿದೆ. ಗರಿಕೆಯು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಚರ್ಮದ ದದ್ದು, ಎಸ್ಜಿಮಾ, ತುರಿಕೆ ಸಮಸ್ಯೆ ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಇದರ ರಸ ಸೇವಿಸಿದರೆ ದೇಹ ನಿರ್ವಿಷವಾಗುತ್ತದೆ. ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಬಾಯಿ ಹುಣ್ಣು, ಗಾಯದ ಸಮಸ್ಯೆ ತಡೆಯುತ್ತದೆ.