ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡು ಬಂದರೆ ತಪ್ಪದೇ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ...



ದೇಹದಲ್ಲಿ ಈ ಲಕ್ಷಣಗಳು ಕಂಡರೆ ಜೋಕೆ!

ಜೀವನಶೈಲಿ ಸಂಬಂಧಿ ರೋಗಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕೊನೆ ಕ್ಷ ಣದ ಆಘಾತದಿಂದ ತತ್ತರಿಸುವ ಬದಲು, ರೋಗಲಕ್ಷ ಣಗಳನ್ನು ಮೊದಲೇ ಪತ್ತೆಹಚ್ಚುವ ಕ್ಷ ಮತೆ ಬೆಳೆಸಿಕೊಳ್ಳುವುದು ಒಳಿತು.

dont neglect if you found these symptoms in your body
ದೇಹದಲ್ಲಿ ಈ ಲಕ್ಷಣಗಳು ಕಂಡರೆ ಜೋಕೆ!

ಜೀವನಶೈಲಿ ಸಂಬಂಧಿ ರೋಗಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕೊನೆ ಕ್ಷ ಣದ ಆಘಾತದಿಂದ ತತ್ತರಿಸುವ ಬದಲು, ರೋಗಲಕ್ಷ ಣಗಳನ್ನು ಮೊದಲೇ ಪತ್ತೆಹಚ್ಚುವ ಕ್ಷ ಮತೆ ಬೆಳೆಸಿಕೊಳ್ಳುವುದು ಒಳಿತು. ಇದರಿಂದಾಗಿ ನೀವು ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲದೆ, ನಿಮ್ಮ ಒಟ್ಟಾರೆ ಜೀವನವನ್ನೂ ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಧುನಿಕ ಜೀವನವನ್ನು ಕಾಡುತ್ತಿರುವ 10 ಪ್ರಮುಖ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳನ್ನು ಮೊದಲೇ ಹೇಗೆ ಪತ್ತೆ ಹಚ್ಚಬೇಕು ಎನ್ನುವ ಬಗ್ಗೆ ನಿಶಿತಾ ಸಭರ್‌ವಾಲ್‌ ನೀಡಿರುವ ಮಾಹಿತಿ ಇಲ್ಲಿದೆ...

1)ಹೃದಯ ಸಮಸ್ಯೆ

ಇಂದು ಜಗತ್ತಿನಲ್ಲಿ ಅತಿ ಮಾರಕ, ವ್ಯಾಪಕ ಸಮಸ್ಯೆಯೆಂದರೆ ಹೃದ್ರೋಗಗಳು. ಸಿನೆಮಾಗಳನ್ನು ನೋಡಿ ಬೆಳೆದ ನಮಗೆ, 'ವ್ಯಕ್ತಿಯೊಬ್ಬನಿಗೆ ಹೃದಯ ತೊಂದರೆ ಇದೆ ಎನ್ನುವುದು ಆತ ತನ್ನ ಎದೆಗೆ ಕೈ ಹಿಡಿದು ಹಠಾತ್ತನೆ ಕುಸಿದು ಬಿದ್ದಾಗಲೇ ಗೊತ್ತಾಗುತ್ತದೆ.' ಎಂದೇ ಭಾವಿಸಿರುತ್ತೇವೆ. ಕಾಲ ಮಿಂಚುವ ಮೊದಲೇ ಈ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಈ ಬಗ್ಗೆ ಡಾ. ಪಿ. ಜಯಪಾಂಡಿಯನ್‌ ಎಂಬ ಖ್ಯಾತ ಹೃದ್ರೋಗತಜ್ಞರು ಹೇಳುವುದಿಷ್ಟು: ''ಕೆಲವು ಕುಟುಂಬಗಳಲ್ಲಿ ಹೃದಯ ರಕ್ತನಾಳಗಳ ಸಮಸ್ಯೆಯ ಇತಿಹಾಸವಿರುತ್ತದೆ. ಅಂಥವರ ಮಕ್ಕಳಿಗೂ ಅಪಾಯ ಎದುರಾಗಬಲ್ಲದು. ಹೀಗಾಗಿ, ಕಾಲಕಾಲಕ್ಕೆ ಹೃದ್ರೋಗ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು,'

ಪ್ರಮುಖ ಲಕ್ಷ ಣಗಳು:

1)
 ಬೆಳಗ್ಗೆ ಎದ್ದೇಳಲು ಆಯಾಸ-ಅಶಕ್ತತೆಯಾಗುವುದು. ತುಸು ದೈಹಿಕ ಶ್ರಮವಾದರೂ ಉಸಿರಾಡುವುದಕ್ಕೆ ಕಷ್ಟವಾಗುವುದು.

2)ಎದೆ ನೋವು

3) ನಿರಂತರ ಅಸ್ವಸ್ಥತೆ, ಬೆವರುವುದು, ಕಿರಿಕಿರಿಯಾಗುವುದು, ದೌರ್ಬಲ್ಯ ಕಾಡುವುದು

4) ದೇಹದ ಮೇಲ್ಭಾಗದಲ್ಲಿ ನೋವಾಗುತ್ತಿರುವಂತೆ ಭಾಸವಾಗುವುದು

2) ಲಿವರ್‌ ಸಮಸ್ಯೆ

ಪುನರುಜ್ಜೀವಗೊಳ್ಳುವ ಮತ್ತು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುವ ಗುಣ ಯಕೃತ್ತಿಗೆ ಇದೆ. ಇದು ನಮ್ಮ ದೇಹದ ಅತಿ ಮುಖ್ಯ ಅಂಗವಾಗಿದ್ದು, ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ, ಪೋಷಕಾಂಶಗಳನ್ನು ಶೇಖರಿಸಿಡುತ್ತದೆ, ಅಪಾಯಕಾರಿ ಅಂಶಗಳನ್ನು ತೊಲಗಿಸುತ್ತದೆ. ಹೀಗಾಗಿ ಯಕೃತ್ತಿಗೆ ಏನಾದರೂ ಹಾನಿಯಾದರೆ, ಅದರಿಂದ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ.

ಪ್ರಮುಖ ಲಕ್ಷ ಣಗಳು:

1)
 ಹೊಟ್ಟೆ ನೋವು

2) ಗಾಢ ಬಣ್ಣದ ಮೂತ್ರ, ಮೂತ್ರದಲ್ಲಿ ರಕ್ತ

3) ಅತಿಭೇದಿ

4) ಮುಂದುವರಿದ ಕೇಸುಗಳಲ್ಲಿ, ರೋಗಿಗಳ ಬಣ್ಣ ಹಳದಿಗೆ ತಿರುಗಬಹುದು(ಕಾಮಾಲೆ) ಮತ್ತು ಅವರು ಗೊಂದಲಕ್ಕೀಡಾದವರಂತೆ ಕಂಡುಬರುವುದು.

3) ಕ್ಯಾನ್ಸರ್‌

ಕೆಲ ವರ್ಷಗಳಿಂದ ವಿಜ್ಞಾನ ಲೋಕದಲ್ಲಿ ಆಗುತ್ತಿರುವ ಅದ್ಭುತ ಸಂಶೋಧನೆಗಳಿಂದಾಗಿ, ಕ್ಯಾನ್ಸರ್‌ ರೋಗದ ಚಿಕಿತ್ಸೆ ಈಗ ಉತ್ತಮಗೊಂಡಿದೆ ಎನ್ನುತ್ತಾರೆ ವೈದ್ಯರು. ಆದರೆ ಕ್ಯಾನ್ಸರ್‌ ಗಡ್ಡೆಯನ್ನು ಆರಂಭದ ಹಂತದಲ್ಲಿದ್ದಾಗಲೇ ಗುರುತಿಸಿದರೆ ಅಪಾಯವನ್ನು ತಡೆಗಟ್ಟಬಹುದು.

ಪ್ರಮುಖ ಲಕ್ಷ ಣಗಳು:

1) ದೇಹದ ತೂಕದಲ್ಲಿ ಹಠಾತ್‌ ಬದಲಾವಣೆ

2) ಚರ್ಮದ ಬಣ್ಣ ಬದಲಾಗುವುದು(ಕಪ್ಪು-ಹಳದಿ ಬಣ್ಣಕ್ಕೆ ತಿರುಗುವುದು, ತುರಿಕೆಯಾಗುವುದು). ಈ ಲಕ್ಷ ಣ ಚರ್ಮ ಕ್ಯಾನ್ಸರ್‌ನಲ್ಲೇ ಹೆಚ್ಚಾಗಿ ಕಾಣಿಸುತ್ತದೆ.

3) ಅಸಹಜ ರಕ್ತಸ್ರಾವ, ನಿಧಾನಕ್ಕೆ ಗಾಯಗಳು ಮಾಯುವುದು(ಈ ಲಕ್ಷ ಣಗಳು ಶ್ವಾಸಕೋಶ ಕ್ಯಾನ್ಸರ್‌ ಮತ್ತು ಸ್ತನ ಕ್ಯಾನ್ಸರ್‌ನಲ್ಲಿ ಹೆಚ್ಚು)

4) ಮೂತ್ರಕೋಶದ ಅಸಹಜ ಪ್ರಕ್ರಿಯೆ

5) ಸ್ತನ ಅಥವಾ ದೇಹದ ಇತರೆ ಭಾಗದಲ್ಲಿ ಅಸಹಜ ಉಬ್ಬು

-ಶ್ವಾಸಕೋಶ ಕ್ಯಾನ್ಸರ್‌-

ಸಾಮಾನ್ಯವಾಗಿ ಇಡೀ ಶ್ವಾಸಕೋಶವನ್ನು ಆವರಿಸುವವರೆಗೂ ಈ ಕ್ಯಾನ್ಸರ್‌ ಯಾವುದೇ ಲಕ್ಷ ಣ ತೋರಿಸುವುದಿಲ್ಲ. ಆದರೆ ಕೆಲ ವ್ಯಕ್ತಿಗಳಲ್ಲಿ ಪೂರ್ವ ಲಕ್ಷ ಣಗಳೂ ಕಾಣಿಸಿಕೊಳ್ಳುತ್ತವೆ. 'ನಿರಂತರ ಕೆಮ್ಮು, ಎದೆ ನೋವು, ತೂಕ ಕಳೆದುಕೊಳ್ಳುವುದು, ಉಸಿರಾಟದ ತೊಂದರೆ ಎದುರಾದರೆ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ರೋಗವನ್ನು ಆರಂಭದ ಹಂತದಲ್ಲಿಯೇ ಗುರುತಿಸಿದರೆ ಚಿಕಿತ್ಸೆಯ ಯಶಸ್ಸು ಹೆಚ್ಚಾಗುತ್ತದೆ,'' ಎನ್ನುತ್ತಾರೆ ವೈದ್ಯರು.

4) ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದ ಪೂರ್ವ ಲಕ್ಷ ಣಗಳನ್ನು ಗುರುತಿಸಲು ಇಂದಿಗೂ ಸಾಧ್ಯವಾಗಿಲ್ಲ. ಇದನ್ನು ಸೈಲೆಂಟ್‌ ಕಿಲ್ಲರ್‌ ಎಂದು ಕರೆಯುವುದು ಈ ಕಾರಣಕ್ಕಾಗಿಯೇ. ಹೀಗಾಗಿ ಬಹುತೇಕ ವೈದ್ಯರು ತಮ್ಮ ರೋಗಿಗಳ ಬ್ಲಡ್‌ ಪ್ರೆಶರ್‌ ಪರೀಕ್ಷಿಸುತ್ತಾರೆ. ಅಧಿಕ ರಕ್ತದೊತ‚್ತಡ ಇದೆಯೋ, ಇಲ್ಲವೋ ಎನ್ನುವುದನ್ನು ಗುರುತಿಸುವುದಕ್ಕೆ, ನಿರಂತರವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ಪ್ರಮುಖ ಲಕ್ಷಣಗಳು: 1) ಎದೆಯಲ್ಲಿ ಉರಿ, ತಲೆ ನೋವು

2) ಕೆಲವು ರೋಗಿಗಳಿಗೆ ದೃಷ್ಟಿ ಮಂದವಾಗುತ್ತದೆ, ಮೂಗಿನಿಂದ ರಕ್ತ ಸೋರುತ್ತದೆ

3)ತಲೆಸುತ್ತು

5) ಸಕ್ಕರೆ ಖಾಯಿಲೆ

ಡಯಾಬಿಟಿಸ್‌ ಲಕ್ಷ ಣಗಳು ಬಹಳ ಸಹಜವಾಗಿರುವುದರಿಂದ ಜನರು ಇದನ್ನೆಲ್ಲ ಗಮನಿಸುವಿದೇ ಇಲ್ಲ. ಒಂದು ವೇಳೆ ಸಕ್ಕರೆ ಖಾಯಿಲೆಗೆ ಚಿಕಿತ್ಸೆ ಪಡೆಯದೇ ಹೋದರೆ, ವ್ಯಕ್ತಿಯು ಇನ್ನಿತರ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ನಿಮ್ಮ ಕುಟುಂಬದಲ್ಲಿ ಸಕ್ಕರೆ ಖಾಯಿಲೆಯ ಇತಿಹಾಸವಿದ್ದರೆ, ಕೂಡಲೇ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ.

ಪ್ರಮುಖ ಲಕ್ಷ ಣಗಳು: 1) ವಿಪರೀತ ದಾಹವಾಗುವುದು

2) ಹೆಚ್ಚುಬಾರಿ ಮೂತ್ರ ವಿಸರ್ಜನೆ ಮಾಡುವುದು

3) ಸುಸ್ತು

4) ಅಸಹಜವಾಗಿ ದೇಹದ ತೂಕ ತಗ್ಗುವುದು

6) ಕಿಡ್ನಿ ಸಮಸ್ಯೆ

ನಮ್ಮ ದೇಹದ ಮತ್ತೊಂದು ಮುಖ್ಯ ಅಂಗವೆಂದರೆ ಕಿಡ್ನಿ. ಹೊಲಸನ್ನು ಹೊರಹಾಕಿ, ದೇಹವು ಸಮಸ್ಥಿತಿಯಲ್ಲಿ ಇರುವಂತೆ ಸಹಕರಿಸುತ್ತದೆ ಈ ಅಂಗ. ಹೀಗಾಗಿ, ಕಿಡ್ನಿ ಸಮಸ್ಯೆ ಆರಂಭವಾದರೆ ಯಾವ ಲಕ್ಷ ಣಗಳು ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ತಿಳಿದುಕೊಂಡು, ಅದನ್ನು ಆರೋಗ್ಯಯುತವಾಗಿ ಇಡುವಂಥ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಆರಂಭಿಸಿ. ''ಕಿಡ್ನಿ ಸಮಸ್ಯೆಗಳನ್ನು ತಪ್ಪಿಸಲು ಎಲ್ಲರೂ ಪ್ರತಿವರ್ಷ ಬಿಪಿ ಮತ್ತು ಡಯಾಬಿಟಿಸ್‌ ಚೆಕ್‌ಅಪ್‌ ಮಾಡಿಸಿಕೊಳ್ಳಬೇಕು. 50 ವರ್ಷ ದಾಟಿದವರು ಸೀರಂ ಪಿಎಸ್‌ಎ ಟೆಸ್ಟ್‌ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ,'' ಎನ್ನುತ್ತಾರೆ ಬೆಂಗಳೂರಿನ ಮೂತ್ರಶಾಸ್ತ್ರಜ್ಞ ಡಾ. ಗಿರೀಶ್‌ ನೆಳಿವಿಗಿ.

ಪ್ರಮುಖ ಲಕ್ಷ ಣಗಳು: 1) ದೇಹದಲ್ಲಿ ವಿಷಕಾರಿ ಅಂಶಗಳ ಹೆಚ್ಚಳದಿಂದಾಗಿ ನಿದ್ರೆ ಮಾಡಲು ತೊಂದರೆ

2) ಮೂತ್ರ ವಿಸರ್ಜನೆಯಲ್ಲಿ ಕಷ್ಟ: ಮೂತ್ರದಲ್ಲಿ ರಕ್ತ, ನಿರಂತರ ಮೂತ್ರ ವಿಸರ್ಜನೆ, ಮೂತ್ರದಲ್ಲಿ ಗುಳ್ಳೆಗಳ(ಬಬಲ್‌) ಹೆಚ್ಚಳ

7) ಪಿಸಿಓ

ಈಗಂತೂ ಪಾಲಿಸಿಸ್ಟಿಕ್‌ ಓವೇರಿಯನ್‌ ಸಿಂಡ್ರೋಮ್‌ ಮಹಿಳೆಯರಿಗೆ ಹೆಚ್ಚು ಕಾಡತೊಡಗಿದೆ. ಪ್ರೌಢಾವಸ್ಥೆ ತಲುಪಿದ ನಂತರದಿಂದ ಯಾವಾಗ ಬೇಕಾದರೂ ಈ ಸಮಸ್ಯೆ ಅವರಿಗೆ ಎದುರಾಗಬಹುದು. ಅನಾರೋಗ್ಯಕರ ಜೀವನಶೈಲಿ ದೇಹದಲ್ಲಿನ ಹೌರ್ಮೋನುಗಳ ಅಸಮತೋಲನವನ್ನು ಹೆಚ್ಚಿಸುತ್ತದೆ.

ಪ್ರಮುಖ ಲಕ್ಷ ಣಗಳು: 1) ಬಳಲಿಕೆ, ಭಾವನಾತ್ಮಕ ಏರುಪೇರು, ನಿದ್ರಾ ಸಮಯದಲ್ಲಿ ವ್ಯತ್ಯಯ

2) ಮುಖದ ಕೂದಲಿನ ಅಸಹಜ ಬೆಳವಣಿಗೆ, ತಲೆಗೂದಲು ತೆಳುವಾಗುವುದು, ಚರ್ಮ ಕಪ್ಪಿಡುವುದು, ಅಸಹಜವಾಗಿ ದೇಹದ ತೂಕ ಹೆಚ್ಚುವುದು

3) ಮುಟ್ಟಿನ ಸಮಯ ವ್ಯತ್ಯಯವಾಗುವುದು, ಅಥವಾ ಮುಟ್ಟೇ ಆಗದಿರುವುದು. ಗರ್ಭಧರಿಸಲು ಕಷ್ಟವೆದುರಾಗುವುದು

8) ಖಿನ್ನತೆ

ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಲೇ ಇರುವುದರಿಂದ, ಖಿನ್ನತೆ ಅಂದರೇನು ಎಂದು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಒಂದು ದಿನ ಬೇಜಾರಿನಲ್ಲಿರುವುದು ಬೇರೆ, ಆದರೆ ನಿರಂತರವಾಗಿ ಮಾನಸಿಕವಾಗಿ ಕುಗ್ಗುತ್ತಾ ಇರುವುದೇ ಖಿನ್ನತೆ. ''ಖಿನ್ನತೆಯ ಅತಿ ದೊಡ್ಡ ಲಕ್ಷ ಣವೆಂದರೆ, ಸಾಮಾನ್ಯ ದಿನವನ್ನು ದೂಡಲೂ ಅಸಾಧ್ಯವೆನಿಸಿಬಿಡುವುದು. ನಿಮಗೆ ಅತಿಯಾದ ನಿರಾಸಕ್ತಿ ಕಾಡುತ್ತಿದ್ದರೆ, ಕಷ್ಟಪಡುತ್ತಿದ್ದರೆ ಕೂಡಲೇ ತಜ್ಞರನ್ನು ಭೇಟಿಯಾಗಿ. ಪರಿಸ್ಥಿತಿ ವಿಕೋಪಕ್ಕೆ ತಿರುಗುವವರೆಗೂ ಕಾಯಬೇಡಿ,'' ಎನ್ನುತ್ತಾರೆ ಮನಶ್ಶಾಸ್ತ್ರಜ್ಞ ಡಾ. ರೋಹಿತ್‌ ಕುಮಾರ್‌.

ಪ್ರಮುಖ ಲಕ್ಷ ಣಗಳು: 1)ನಿದ್ರಾವಧಿ ಮತ್ತು ದೇಹದ ತೂಕದಲ್ಲಿ ಏರುಪೇರಾಗುವುದು

2) 2 ವಾರಕ್ಕಿಂತಲೂ ಹೆಚ್ಚಿನ ಸಮಯ ಅಸಹಾಯಕತೆ, ಪಾಪಪ್ರಜ್ಞೆ ಮತ್ತು ನಿರಾಸಕ್ತಿ ಕಾಡುವುದು.

3) ಮದ್ಯ ಮತ್ತು ಮಾದಕದ್ರವ್ಯಗಳ ದಾಸರಾಗುವುದು

4) ಒಂದೆಡೆ ಗಮನ ಹರಿಸಲು ಕಷ್ಟವಾಗುವುದು. ಆಯಾಸ ಎನಿಸುವುದು.

5) ಆತ್ಮಹತ್ಯೆಯ ಯೋಚನೆ ಕಾಡುವುದು.

9) ಲಕ್ವ(ಸ್ಟ್ರೋಕ್‌)

ಪಾರ್ಶ್ವವಾಯುವಿನ ಹೊಡೆತವನ್ನು ತಪ್ಪಿಸಲು ಇರುವ ಏಕೈಕ ದಾರಿಯೆಂದರೆ, ಅದರ ಪೂರ್ವಲಕ್ಷ ಣಗಳನ್ನು ತಿಳಿದುಕೊಳ್ಳುವುದು. ನಿಮ್ಮ ಸುತ್ತಲಿರುವವರಲ್ಲಿ ಅಥವಾ ನಿಮ್ಮಲ್ಲಿ ಇಂಥ ಲಕ್ಷ ಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಪ್ರಮುಖ ಲಕ್ಷ ಣಗಳು: 1) ಸಮತೋಲನ ಕಳೆದುಕೊಳ್ಳುತ್ತಿರುವಂತೆ ಭಾಸವಾಗುವುದು ಅಥವಾ ಮೈ ಮರಗಟ್ಟಿದಂತಾಗುವುದು

2) ಮಾತನಾಡಲು ಕಷ್ಟವಾಗುವುದು(ತೊದಲು), ಮುಖ ಇಳಿಬೀಳುವುದು, ದೃಷ್ಟಿ ಮಂದವಾಗುವುದು

3) ಒಂದೇ ಕೈಯಲ್ಲಿ ನೋವು ಅಥವಾ ಮರಗಟ್ಟಿದಂಥ ಅನುಭವವಾಗುವುದು.

10) ಬ್ರೇನ್‌ ಟ್ಯೂಮರ್‌

ಒಂದು ಚಿಕ್ಕ ತಲೆನೋವಿನ ರೂಪದಲ್ಲಿ ಈ ರೋಗ ಆರಂಭವಾಗಬಹುದು. ಮಿದುಳಿನ ಟ್ಯೂಮರ್‌ ಅನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾದರೂ, ಮಿದುಳಿನ ಕಾರ್ಯವೈಖರಿಯಲ್ಲಾಗುವ ಏರುಪೇರನ್ನು ಗುರುತಿಸಿ ರೋಗ ಪತ್ತೆ ತುಸು ಸಾಧ್ಯ.

ಪ್ರಮುಖ ಲಕ್ಷ ಣಗಳು: 1)ವ್ಯಕ್ತಿತ್ವದಲ್ಲಿ ಬದಲಾವಣೆ, ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ನಿತ್ಯದ ಸಣ್ಣಪುಟ್ಟ ಕೆಲಸಗಳನ್ನೂ ನಿರ್ವಹಿಸಲು ತೊಂದರೆಯಾಗುವುದು.

2) ತಲೆನೋವು, ಮಾಂಸಖಂಡಗಳಲ್ಲಿ ಸೆಳೆತ, ಮಾತು ಮತ್ತು ದೃಷ್ಟಿಯಲ್ಲಿ ವ್ಯತ್ಯಯ

3) ಕೆಲವು ವಿಕೋಪ ಸ್ಥಿತಿಗಳಲ್ಲಿ ದೇಹ ಸ್ತಂಭನವಾಗುತ್ತದೆ ಮತ್ತು ಕೈಕಾಲುಗಳ ಮೇಲೆ ನಿಯಂತ್ರಣ ತಪ್ಪುತ್ತದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...