ಯಾರ ಮನೆಯಲ್ಲಿ ಮಾಟಮಂತ್ರ ಪ್ರಯೋಗವಾಗುತ್ತಿದೆಯೋ. ದುಷ್ಟ ಶಕ್ತಿಗಳ ಪರಿಣಾಮ ಮನೆಯಲ್ಲಿ ಹೆಚ್ಚಿದೆಯೋ ಅಂಥವರು ನಾವಿವತ್ತು ಹೇಳುವ ವಸ್ತುವನ್ನ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು. ಆ ಬಗ್ಗೆ ಹೇಚ್ಚಿನ ಮಾಹಿತಿಯನ್ನ ನೀಡಲಿದ್ದೇವೆ.
ಇಂದಿನ ಕಾಲದಲ್ಲೂ ಕೂಡ ಕೆಲವು ಕಡೆ ಮಾಟ ಮಂತ್ರ ಪ್ರಯೋಗ ಮಾಡಲಾಗುತ್ತದೆ. ಕೆಲ ಹಳ್ಳಿಗಳಲ್ಲಿ ಇಂದೂ ಕೂಡ ತಮಗಾಗದವರನ್ನ ಕಂಡ್ರೆ ಮಾಟ ಮಾಡಿಸುವ ಜನರಿದ್ದಾರೆ. ಆದ್ರೆ ಯಾರ ಮನೆಯಲ್ಲಿ ಮಾಟ ಮಂತ್ರದ ಪ್ರಯೋಗಗಳಾಗುತ್ತದೆಯೋ ಅಂಥವರು ಕಾಲಭೈರವನಿಗೆ ಸಂಬಂಧಪಟ್ಟ ವಸ್ತುವೊಂದನ್ನ ಅಮವಾಸ್ಯೆಯ ದಿನ ತಂದು ಮನೆಯಲ್ಲಿರಿಸಬೇಕು. ಯಾವುದು ಆ ವಸ್ತು ಅನ್ನೋ ಪ್ರಶ್ನೆಗೆ ಉತ್ತರ, ಕಪ್ಪು ಅರಿಷಿನದ ಕೊಂಬು.
ಹೌದು ಕಪ್ಪು ಅರಿಷಿನದ ಕೊಂಬನ್ನ ಅಮವಾಸ್ಯೆಯ ದಿನ ಮನೆಯಲ್ಲಿ ತಂದಿರಿಸಿ, ಪೂಜೆ ಮಾಡಬೇಕು. ಮಾಟ ಮಂತ್ರಗಳನ್ನ ದೂರ ಮಾಡಿ, ದುಷ್ಟ ಶಕ್ತಿಗಳನ್ನ, ನಕಾರಾತ್ಮಕ ಶಕ್ತಿಗಳನ್ನ ಹೊಡದೋಡಿಸುವ ಶಕ್ತಿ ತಾಯಿ ಚಾಮುಂಡೇಶ್ವರಿಗಿದೆ. ಹಾಗಾಗಿ ಚಾಮುಂಡೇಶ್ವರಿಯ ಫೋಟೋ ಮುಂದೆ ಈ ಕೊಂಬನ್ನ ಇಟ್ಟು ಪೂಜೆ ಮಾಡಬೇಕು.
ಪೂಜೆಯ ಬಳಿಕ ಕೆಂಪು ವಸ್ತ್ರದಲ್ಲಿ ಈ ಕೊಂಬನ್ನ ಕಟ್ಟಿ, ದುಡ್ಡಿಡುವ ಜಾಗದಲ್ಲಿ ಅಥವಾ ಕಪಾಟಿನಲ್ಲಿರಿಸಬೇಕು. ಆದ್ರೆ ಮುಟ್ಟಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಈ ಕೊಂಬನ್ನ ಮುಟ್ಟಬಾರದು. ಅಪ್ಪಿ ತಪ್ಪಿಯೂ ಕೂಡ ಈ ಕೊಂಬನ್ನ ಮುಟ್ಟಿದಲ್ಲಿ ಇದರಲ್ಲಿರುವ ಶಕ್ತಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಈ ಕೊಂಬನ್ನ ದೇವರಕೋಣೆಯಲ್ಲಿ ಇಡುವುದು ಉತ್ತಮ.
ಈ ಕೊಂಬನ್ನ ದೇವರ ಕೋಣೆಯಲ್ಲಿರಿಸಿ, ಪ್ರತಿ ಅಮವಾಸ್ಯೆಯ ದಿನ ಈ ಕೊಂಬಿಗೆ ಮಡಿಮೈಲಿಗೆಯಿಂದ ಪೂಜೆ ಸಲ್ಲಿಸಬೇಕು. ಅಲ್ಲದೇ, ನಿಮಗಿರುವ ನಕಾರಾತ್ಮಕ ಶಕ್ತಿಯ ಕಾಟ, ದುಷ್ಟ ಶಕ್ತಿಯ ಕಾಟದಿಂದ ಕಾಪಾಡು ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿ. ಆದರೆ ಪೂಜೆ ಮಾಡುವ ದಿನ ಮಾಂಸಾಹಾರ ಸೇವನೆ, ಮದ್ಯ ಸೇವನೆ ಮಾಡಿರಬಾರದು.