ನಾಮಸ್ಮರಣೆಯಿಂದಲೇ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು ಎಂಬ ಸುಲಭ ಮಾರ್ಗ ತೋರಿದವನು, 14 ಲೋಕಗಳ ಒಡೆಯನಾದ ಶ್ರೀ ಕೃಷ್ಣನ ಮತ್ತೊಂದು ಅವತಾರರ ಪಂಡರಾಪುರದ 'ಪಾಂಡುರಂಗ ವಿಠಲ'. ತನ್ನ ಭಕ್ತ ನೊಬ್ಬನ ಕೋರಿಕೆಗೆ ಮಣಿದು ಅವನು ತಳ್ಳಿದ ಒಂದೇ ಇಟ್ಟಿಗೆಯ ಮೇಲೆ ಯುಗ ಯುಗಗಳಿಂದಲೂ ತನ್ನ ಸೊಂಟದ ಮೇಲೆ ಕೈಗಳನ್ನು ಇಟ್ಟುಕೊಂಡು ನಿಂತಿದ್ದಾನೆ. ಅನ್ನಬ್ರಹ್ಮ ಸ್ವರೂಪಿ ಉಡುಪಿ ಕೃಷ್ಣನಾದರೇ, ಬಡ್ಡಿ ಕಾಸು ಬಿಡದ ಕಾಂಚಾಣ ಬ್ರಹ್ಮ ತಿರುಪತಿ ತಿಮ್ಮಪ್ಪ, ನಾದಬ್ರಹ್ಮ ಪಂಡರಾಪುರದ ಪಾಂಡು ರಂಗ ಎಂದು ಜಗದ್ವಿಖ್ಯಾತವಾದ ಭಕ್ತರನ್ನು ಕರೆಯುವ ಪುಣ್ಯಕ್ಷೇತ್ರಗಳು.
ಪಂಡರಾಪುರ ಕ್ಷೇತ್ರ ಇರುವುದು ನೆರೆ ರಾಜ್ಯ ಮಹಾರಾಷ್ಟ್ರದ ಭೀಮಾ ನದಿಯ ದಂಡೆಯ ಸೋಲಾಪುರದ ಜಿಲ್ಲೆಯಲ್ಲಿ. ಇಲ್ಲಿನ ನದಿ ಅರ್ಧಚಂದ್ರಾ ಕೃತಿಯಲ್ಲಿ ಹರಿಯುವುದರಿಂದ 'ಚಂದ್ರಭಾಗ' ನದಿ ಎಂದು ಕರೆಯುತ್ತಾರೆ. ಇಂಥ ಪುಣ್ಯ ಕ್ಷೇತ್ರಕ್ಕೆ 2000 ವರ್ಷಗಳ ಇತಿಹಾಸವಿದೆ. ಈ ಕ್ಷೇತ್ರದಲ್ಲಿ ಮೊದಲು ದಿಂಡೀರನ ಎಂಬ ಕ್ರೂರ ರಾಕ್ಷಸನಿದ್ದು ಬ್ರಹ್ಮ ಹಾಗೂ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿ ವರ ಪಡೆದು ತಾನು ಅಜೇಯನೆಂಬ ಅಹಂಕಾರದಿಂದ ಭೂಲೋಕದ ಋಷಿಮುನಿಗಳು, ದೇವಲೋಕದ ಇಂದ್ರನ ಪದವಿಗೂ ಕಣ್ಣು ಹಾಕಿ ಕಂಟಕನಾಗಿದ್ದನು. ಅವನ ಕಾಟ ಸಹಿಸದೆ ಇಂದ್ರ ಹಾಗೂ ದೇವತೆಗಳು ಮಹಾವಿಷ್ಣು ಮೊರೆ ಹೋಗುತ್ತಾರೆ. ವಿಷ್ಣು ಅವರ ಮೊರೆ ಕೇಳಿ, ನಾನು ನನ್ನ ಭಕ್ತನಾದ 'ಶ್ರೀ ಚಂದ್ರ' ಎಂಬ ರಾಜನ ಮಗನಾಗಿ ಜನಿಸಿ ದಿಂಡೀರನ ಸಂಹಾರ ಮಾಡುತ್ತೇನೆ ಎಂದು ಅಭಯ ಕೊಡುತ್ತಾನೆ. ಇತ್ತ ಶ್ರೀ ಚಂದ್ರ ರಾಜನು ಮಹಾವಿಷ್ಣುವೆ ತನ್ನ ಮಗನಾಗಬೇಕೆಂದು, ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿ ಶಿವನಲ್ಲಿ ವರ ಪಡೆದನು. ಶಿವನ ಅನುಗ್ರಹದಿಂದ ಶ್ರೀ ಚಂದ್ರನಿಗೆ ಸಂತಾನವಾಗಿ, ಮಲ್ಲಿಕಾರ್ಜುನ ಎಂಬ ಹೆಸರಿನಿಂದ ಬೆಳೆದನು.
ಒಮ್ಮೆ ಬೇಟೆಗೆಂದು ಕಾಡಿಗೆ ಹೋದಾಗ, ದಿಂಡೀಗ ರಾಕ್ಷಸ ಎದುರಾಗುತ್ತಾನೆ ಅವರಿಬ್ಬರಿಗೂ ಬಹಳ ಕಾಲ ಯುದ್ಧ ನಡೆದು ಕೊನೆಗೆ ಮಲ್ಲಿಕಾರ್ಜುನ ತನ್ನ ಲೋಹದ ಗದೆಯಿಂದ ಹೊಡೆದು ಸಂಹರಿಸುತ್ತಾನೆ. ರಾಕ್ಷಸನು ಸಾಯುವ ಮೊದಲು ಶ್ರೀಹರಿ -ಶ್ರೀಹರಿ- ಶ್ರೀಹರಿ ಎಂದು ಸ್ಮರಣೆ ಮಾಡಿದ. ಅವನ ಭಕ್ತಿಗೆ ಮೆಚ್ಚಿ ಮಲ್ಲಿಕಾರ್ಜುನ ವಿಷ್ಣುವಿನ ದರ್ಶನ ಕೊಟ್ಟು ನಿನಗೆ ವರ ಕೊಡುವೆ ಕೇಳು ಎಂದಾಗ ಈ ಕ್ಷೇತ್ರವು ದಿಂಡೀಗವನ ಎಂಬ ನನ್ನ ಹೆಸರಿನಿಂದ ಪ್ರಸಿದ್ಧಿ ಯಾಗಲಿ ಹಾಗೂ ನೀನು ಇಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದನು.ಅವನ ಭಕ್ತಿಗೆ ಒಲಿದ ದಯಾನಿಧಿ ಶ್ರೀಹರಿಯು ತಥಾಸ್ತು ಎಂದು ರಾಕ್ಷಸನಿಗೆ ಮುಕ್ತಿ ಕೊಟ್ಟನು. ಆನಂತರ ಇದನ್ನು ದಿಂಡೀರವನ, ಸೂರ್ಯತೀರ್ಥ, ಗಧಾತೀರ್ಥ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ರಾಕ್ಷಸನಿಗೆ ವರ ಕೊಟ್ಟಂತೆ ಆ ಕ್ಷೇತ್ರದಲ್ಲಿ ನೆಲೆಸಲು ಒಂದು ಕಾರ್ಯ ಕಾರಣ ರೂಪಿಸಿದನು.
ವಿಷ್ಣುವಿನ ಭಕ್ತರಾದ ಜಾನುದೇವ -ಸತ್ಯವತಿ ಎಂಬ ಬ್ರಾಹ್ಮಣ ದಂಪತಿಗಳಿಗೆ ವಿಷ್ಣು ಅಂಶದ ಪುತ್ರನ ಜನನವಾಯಿತು. ಅವನಿಗೆ ಪುಂಡಲೀಕ ಎಂದು ಹೆಸರಿಟ್ಟರು. ಇವನು ಸಹವಾಸ ದೋಷದಿಂದ ದುಶ್ಚಟಗಳೇ ಮೈವೆತ್ತಿದಂತೆ ದುಷ್ಟ ಮಗನಾಗಿ ಬೆಳೆದು ಕಳ್ಳನಾದನು. ತಂದೆ ತಾಯಿ ಎಷ್ಟೇ ಹೇಳಿದರೂ ಕೇಳಲಿಲ್ಲ. ವೃದ್ಧರಾದ ತಂದೆ ತಾಯಿಗಳನ್ನು ದೂರ ಮಾಡಿದ. ಕೆಲವು ಕಾಲ ಕಳೆಯಿತು ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಸಕಲ ಪಾಪಗಳಿಂದ ಮುಕ್ತಿಯಾಗುತ್ತದೆ ಎಂಬ ಸುದ್ದಿ ಕೇಳಿ, ತನ್ನ ಪಾಪಗಳನ್ನು ಕಳೆದುಕೊಳ್ಳುವ ಸಲುವಾಗಿ ಕಾಶಿಗೆ ನಡೆದು ಹೊರಟನು. ಖರ್ಚಿಗೆ ದಾರಿ ಮಧ್ಯದಲ್ಲಿ ಸುಲಿಗೆ ಮಾಡುತ್ತಾ ಅಲ್ಲಲ್ಲೇ ರಾತ್ರಿ ಕಳೆದು ಸಾಗುತ್ತಿದ್ದನು.
ಒಂದು ದಿನ ಕತ್ತಲಾದಾಗ ಒಂದು ಆಶ್ರಮದ ಮುಂದೆ ತಂಗಿದನು ಅದು ಕುಕ್ಕುಟ ಮುನಿಗಳ ಆಶ್ರಮವಾಗಿತ್ತು. ಮರದ ಕೆಳಗೆ ಕುಳಿತು ನೋಡುತ್ತಿ ದ್ದಂತೆ ಕಳಾಹೀನವಾದ ಮುಖ, ನಿಶಕ್ತ ಶರೀರದ ಮೂರು ಜನ ಮಹಿಳೆಯರು ಗುಡಿಸಲ ಒಳಗೆ ಹೋದರು ನಂತರ ಗುಡಿಸಲನ್ನು ಸ್ವಚ್ಛ ಗೊಳಿಸಿ, ಮುನಿಗಳ ಸೇವೆ ಮಾಡಿ ಮುಂಜಾನೆ ಹೊರಗೆ ಬರುವಾಗ ಸುಂದರವಾಗಿ, ಸದೃಢವಾಗಿ
ಬಂದರು. ಪುಂಡಲೀಕನಿಗೆ ಆಶ್ಚರ್ಯವಾಗಿ ಅವರನ್ನು ತಡೆದು ನಿಲ್ಲಿಸಿ, ನೀವು ಯಾರು ರಾತ್ರಿ ಹೋಗುವಾಗ ವೃದ್ಧರಾಗಿ ಬಳಲಿದಂತೆ ಕಾಣುತ್ತಿದ್ದೀರಿ ಬೆಳಗ್ಗೆ ಆಗುತ್ತಲೇ ಸುಂದರ ತರಣಿಯರಂತೆ ಬಂದಿದ್ದೀರಲ್ಲ ಹೇಗೆ? ಹೇಳದಿದ್ದರೆ ನಾನು ಬಿಡುವುದಿಲ್ಲ ಎಂದು ಅಡ್ಡ ಕಟ್ಟಿದ.
ಆಗ ತರುಣಿಯರು ಹೇಳಿದರು ನಾವು ಗಂಗಾ- ಯಮುನಾ- ಸರಸ್ವತಿ ನದಿಗಳು.
ನಮ್ಮ ನದಿ ಒಡಲಲ್ಲಿ ಮನುಷ್ಯರು ಸ್ನಾನ ಮಾಡಿ ತಾವು ಮಾಡಿದ ಪಾಪ ಕರ್ಮಗಳನ್ನು ತೊಳೆದು ಕೊಳ್ಳುತ್ತಾರೆ. ಆ ಪಾಪದ ಫಲವನ್ನು ಹೊತ್ತ ನಾವು ವೃದ್ಧರಾಗಿ ಬಳಲಿ ಕುರೂಪಿಗಳಾಗುತ್ತೇವೆ. ಸಂಜೆಯಾಗುತ್ತಲೇ ನಾವು ಕುಕ್ಕುಟ ಮುನಿಗಳ ಆಶ್ರಮಕ್ಕೆ ಬಂದುಪುಣ್ಯವಂತ ಕುಕ್ಕುಟ ಮುನಿಗಳ ಸೇವೆ ಮಾಡಿ ಪಾಪಗಳಿಂದ ಮುಕ್ತಿ ಪಡೆದು ಲವಲವಿಕೆಯಿಂದ ಹೊರಡುತ್ತೇವೆ ಎಂದು ಹರಸಿ ಹೊರಟರು. ಪುಂಡಲೀಕನು ಪುಣ್ಯವಂತರಾದ ಕುಕ್ಕುಟ ಮುನಿಗಳ ಕುರಿತು ತಿಳಿಯಲು ಆಶ್ರಮದ ಒಳಗೆ ಬಂದನು. ಆಗಲೇ ಅವನ ಮನಸ್ಸು ಬದಲಾದಂತೆ ಅನಿಸಿತು. ಅವರನ್ನು ಕೇಳಿದನು. ನಿಮ್ಮ ಕುಟೀರಕ್ಕೆ ದೇವತೆಗಳಾದ ಗಂಗಾ ಯಮುನಾ ಸರಸ್ವತಿಯರೇ ಬಂದು ಸ್ವಚ್ಛ ಮಾಡಿ ಹೋಗಿದ್ದನ್ನು ನೋಡಿದೆ. ಅಂಥ ದೇವಾನುದೇವತೆಗಳೇ ನಿಮ್ಮ ಸೇವೆ ಮಾಡಲಿಕ್ಕಾಗಿ ಬರಲು ನೀವು ಮಾಡುವ ಕಠಿಣ ತಪಸ್ಸು ಯಾವುದು?ಎಂದು ಕೇಳಿದನು. ಮುನಿಗಳು ಹೇಳಿದರು ನಾನು ಯಾವ ತಪಸ್ಸನ್ನು ಮಾಡುತ್ತಿಲ್ಲ ತಪಸ್ಸು ಮಾಡಿ ಒಲಿಸಿಕೊಳ್ಳಲು ನನಗೆ ಸಮಯವಿಲ್ಲ. ವೃದ್ಧರಾದ ನನ್ನ ತಂದೆ ತಾಯಿಯರ ಸೇವೆ ಮಾಡಿ ನೋಡಿಕೊಳ್ಳುವುದು ಮಾತ್ರ ನನ್ನ ಕೆಲಸ ಬೇರೇನು ಮಾಡುವುದಿಲ್ಲ ಎಂದರು.
ಪುಂಡಲೀಕನು ಪುಣ್ಯ ಪಡೆಯಲು ತಾನು ಕಾಶಿಗೆ ಹೋಗುತ್ತಿರುವ ವಿಷಯ ಕೇಳಿ, ಅವರು ನೀನು ಪುಣ್ಯ ಪಡೆಯಲು ಎಲ್ಲಿಗೂ ಹೋಗಬೇಕಾಗಿಲ್ಲ. ಭಗವಂತನ ನಾಮ ಸ್ಮರಣೆ ಮಾಡುತ್ತಾ, ನಿನ್ನ ತಂದೆ ತಾಯಿ ಸೇವೆ ಮಾಡಿದರೆ
ಸಕಲ ಪಾಪಗಳಿಂದ ಮುಕ್ತಿ ದೊರಕಿ ಪುಣ್ಯ ಲಭಿಸುತ್ತದೆ ಎಂದರು. ಮುನಿಗಳ
ಉಪದೇಶದಿಂದ ತನ್ನ ತಪ್ಪಿನ ಅರಿವಾಗಿ ಕಾಶಿಗೆ ಹೋಗುವುದನ್ನು ಬಿಟ್ಟು ವಾಪಸಾದನು. ತಂದೆ ತಾಯಿಯಲಿ ಕ್ಷಮೆ ಬೇಡಿ, ಆ ಕ್ಷಣದಿಂದಲೇ ನಿರಂತರ ಹರಿನಾಮಸ್ಮರಣೆ ಹಾಗೂ ತಂದೆ ತಾಯಿ ಸೇವೆಯಲ್ಲಿ ವರ್ಷಗಳೇ ಉರುಳಿತು.
ಹೀಗಿರುವಾಗ ಒಮ್ಮೆ ಕೃಷ್ಣನ ಜೊತೆ ಕೋಪಗೊಂಡ ರುಕ್ಮಿಣಿ ತವರು ಮನೆಗೆ ಬಂದಳು. ಅವಳನ್ನು ಬಿಟ್ಟಿರಲಾರದ ಕೃಷ್ಣನು ಅವಳನ್ನು ಹುಡುಕಿಕೊಂಡು
ಮಥುರ- ಗೋಕುಲಾ- ದ್ವಾರಕ ಎಲ್ಲಾ ಕಡೆಗೂ ಸುತ್ತಿ ಮಹಾರಾಷ್ಟ್ರಕ್ಕೆ ಬಂದನು. ತವರಿನಲ್ಲಿದ್ದ ರುಕ್ಮಿಣಿಯನ್ನು ಕಂಡು ಸಮಾಧಾನ ಮಾಡಿದನು. ನಂತರ ಕೃಷ್ಣನು ತನ್ನ ಭಕ್ತ ಪುಂಡಲೀಕನನ್ನು ನೋಡಲು ಅವನ ಮನೆಗೆ ಬಂದನು. ಬಾಗಿಲಲ್ಲಿ ನಿಂತು ಪುಂಡಲೀಕ ಎಂದು ಕೂಗುತ್ತಾನೆ. ತಂದೆ ತಾಯಿ ಕಾಲುಗಳನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಒತ್ತುತ್ತಾ ಕುಳಿತಿದ್ದನು. ಪುಂಡಲೀಕನು ತಿರುಗಿ ನೋಡದೆ, ತಂದೆ ತಾಯಿ ಸೇವೆ ಮುಗಿಸಿ ಬರುತ್ತೇನೆ ಎಂದನು. ಆಗ ಕೃಷ್ಣನು ನಗುತ್ತಾ, ನೀನು ಬರುವ ತನಕ ನಾನು ಎಲ್ಲಿ ನಿಲ್ಲಲಿ ಎಂದು ಕೇಳಿದಾಗ, ಪುಂಡಲೀಕನು ತನ್ನ ಬಳಿ ಇದ್ದ ಒಂದು ಇಟ್ಟಿಗೆಯನ್ನು ತಳ್ಳಿ ಇದರ ಮೇಲೆ ನಿಂತಿರು ಎಂದನು. ಕೃಷ್ಣನು ಕೈಗಳನ್ನು ಸೊಂಟದ ಮೇಲಿಟ್ಟು ನಿಂತು ಅವನು ತಂದೆ ತಾಯಿ ಸೇವೆ ಮಾಡುವುದನ್ನು ನೋಡುತ್ತಾ ನಿಂತನು.
ಪುಂಡಲೀಕ ತನ್ನ ತಂದೆ ತಾಯಿ ಸೇವೆ ಮುಗಿಸಿ ಹೊರಗೆ ಬಂದು ನೋಡುತ್ತಾನೆ ಸಾಕ್ಷಾತ್ ಭಗವಂತನೇ ನಿಂತಿರುವುದನ್ನು ಕಂಡು ಪುಳಕಿತನಾಗಿ ಅವನನ್ನು ಸ್ತುತಿಸಿ ಕೈ ಮುಗಿಯುತ್ತಾನೆ ಹಾಗೂ ನೀನು ಇಲ್ಲಿಯೇ ಸ್ಥಿರವಾಗಿ ನೆಲೆಸು ಎಂದು ಬೇಡಿಕೊಳ್ಳುತ್ತಾನೆ. ಭಕ್ತನ ಮಾತಿನಂತೆ ಕೃಷ್ಣನು ಪತ್ನಿ ರುಕ್ಮಿಣಿ ಸಮೇತ ನೆಲೆಸಿ ದಿಂಢೀರವನಕ್ಕೆ ಪುಂಡಲೀಕನ ಹೆಸರು ಸೇರಿಸಿ 'ಪಂಡರಿನಾಥ ಪಾಂಡು ರಂಗ' ಎಂಬ ಹೆಸರಿನೊಂದಿಗೆ ನೆಲೆಸಿದನು. ಇದು ಮುಂದೆ 'ಪಂಡರಾಪುರ' ಎಂಬ ಪುಣ್ಯ ಕ್ಷೇತ್ರವಾಗಿ ಬೆಳೆಯಿತು. ದೇಶಾದ್ಯಂತ ಭಕ್ತರು ಸಹಸ್ರೋಪಾದಿ ಸಂಖ್ಯೆಯಲ್ಲಿ ಪಾಂಡುರಂಗದ ದರ್ಶನ ಪಡೆಯಲು ಬರುತ್ತಾರೆ.
ಸಂಗ್ರಹ.