ಚೀನಾದ ಆಪ್‌ ಡಿಲಿಟ್‌ ಮಾಡಲು ಬಂದಿದೆ ರಿಮೂವ್‌ ಚೀನ ಆಯಪ್ಸ್‌!

ಕೋವಿಡ್‌-19 ವೈರಸ್‌ ಹಾವಳಿ, ಲಡಾಖ್‌ನಲ್ಲಿ ಚೀನಿ ಸೈನಿಕರ ಕಿರಿಕ್‌ನಿಂದಾಗಿ ಭಾರತದಲ್ಲಿ ಚೀನ ವಸ್ತುಗಳನ್ನು ಬಹಿಷ್ಕರಿಸಿ, ಆಯಪ್‌ ಗಳನ್ನು ಡಿಲೀಟ್‌ ಮಾಡಿ ಎಂಬ ಕೂಗುಗಳು ಜೋರಾಗಿವೆ.

ಆಯಪ್‌ ಗಳನ್ನು ಡಿಲೀಟ್‌ ಮಾಡುವ ವಿಚಾರದಲ್ಲಂತೂ ಇದರ ನೇರ ಲಾಭ ಒಂದು ಆಯಪ್‌ಗೆ ಆಗಿದೆ. “ರಿಮೂವ್‌ ಚೀನ ಆಯಪ್ಸ್‌’ ಹೆಸರಿನ ಈ ಆಯಂಡ್ರಾಯಿಡ್‌ ಆಯಪ್‌ಗೆ ಭರ್ಜರಿ ವೈರಸ್‌ ಆಗಿದ್ದು, ಮೇ 17ರ ಬಳಿಕ 50 ಲಕ್ಷ ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಏನಿದು ರಿಮೂವ್‌ ಚೀನ ಆಯಪ್ಸ್‌?
ಇದು ಯಾವ ಆಯಪ್‌ ಯಾವ ದೇಶದಿಂದ ಲಾಂಚ್‌ ಆಗಿದೆ ಎಂಬುದನ್ನು ಗುರುತಿಸುತ್ತದೆ. ವಿಶೇಷವಾಗಿ ಇದು ಹೆಸರೇ ಹೇಳುವಂತೆ ಚೀನದಿಂದ ಲಾಂಚ್‌ ಆದ ಆಯಪ್‌ ಗಳನ್ನು ಗುರುತಿಸಿ ಡಿಲೀಟ್‌ ಮಾಡುತ್ತದೆ. ಆಯಪ್‌ ಇನ್‌ಸ್ಟಾಲ್‌ ಮಾಡುವಾಗಲೇ ನಿರ್ದಿಷ್ಟ ಆಯಪ್‌ ಚೀನದ್ದು ಆಗಿದ್ದರೆ ತಿಳಿಸುತ್ತದೆ ಕೂಡ.



ಈ ಆಯಪ್‌ ಭಾರತದಲ್ಲಿ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಪ್ರಸಿದ್ಧಿ ಹೊಂದುತ್ತಿದೆ. ಅಲ್ಲೂ ಚೀನ ವಿರೋಧಿ ಮನೋಭಾವನೆ ಹೆಚ್ಚುತ್ತಿದ್ದು, ಆಯಪ್‌ ಹೆಚ್ಚು ಡೌನ್‌ಲೋಡ್‌ ಆಗಲು ಕಾರಣವಾಗಿದೆ.

Remove China Apps' races to 1 million downloads; gives solution to ...

ಆಯಪ್‌ ಕಾರ್ಯಾಚರಣೆ
ಈ ಆಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ. ಇದಕ್ಕೆ ಲಾಗಿನ್‌ ಆಗಬೇಕಾದ ಆವಶ್ಯಕತೆ ಇಲ್ಲ. ಬಳಕೆದಾರರು ಆಯಪ್‌ ಇನ್‌ಸ್ಟಾಲ್‌ ಮಾಡಿ ಸ್ಕ್ಯಾನ್‌ ಕೊಟ್ಟರೆ ಸಾಕು ಇದು ಚೀನ ಮೂಲದ ಆಯಪ್‌ ಅನ್ನು ಹುಡುಕುತ್ತದೆ. ಗಮನಿಸಬೇಕಾದ ಅಂಶವೆಂದರೆ ಬಳಕೆದಾರರು ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿದ ಆಯಪ್‌ ಗಳನ್ನು ಮಾತ್ರವೇ ಇದು ಗುರುತಿಸುತ್ತದೆ. ಒಂದು ವೇಳೆ ಬಳಕೆದಾರರ ಫೋನ್‌ನಲ್ಲಿ ಡಿಫಾಲ್ಟ್ ಆಗಿ ಚೀನ ಆಯಪ್‌ ಇದ್ದರೆ ಅದನ್ನು ಡಿಲೀಟ್‌ ಮಾಡದು.


ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...