#ಅಗಸೆ ಇದ್ದರೆ ಬೊಗಸೆ
#ಬೊಕ್ಕತಲೆಯೆ ,ಕೂದಲು ಉದುರುತ್ತಿದೆಯಾ ,ಕೂದಲ ಬೆಳವಣಿಗೆ ಆಗಲು ಮನೆಯಲ್ಲೇ ಮಾಡಬಹುದಾದ ಚಿಕಿತ್ಸೆಯ ಬಗ್ಗೆ ಈ ಲೇಖನ .
ಕೂದಲು ಬೆಳೆಯುವುದು ಎಂಬುದು ಸಾಮಾನ್ಯವಾಗಿ ನೈಸರ್ಗಿಕ ಕ್ರಿಯೆಗೆಒಳಪಟ್ಟಿದ್ದು .ಬೇಗ ಬೇಗ ನಡೆಯಬಹುದು ,ಓಡಬಹುದು ಆದರೆ ಕೂದಲು ಬೆಳೆಯಲು ಒಂದು ನಿರ್ದಿಷ್ಟ ಕಾಲಬೇಕು .
ಅದಕ್ಕಾಗಿ ನಾವು ಕೆಲ ವಿಷಯ ಗಳನ್ನು ಸತತವಾಗಿ ಅನುಸರಿಸಬೇಕಾಗುತ್ತದೆ .
ಅಗಾಗ ಕೂದಲ ತುದಿಯನ್ನು ಕತ್ತರಿಸುವುದರಿಂದ ಕೂದಲು ಬೆಳೆಯಲು ಅನುಕೂಲವಾಗುತ್ತದೆ .
ಆದರೂ ಕೂದಲ ಬೆಳವಣಿಗೆ ಬೇಗ ಬೆಳೆಯಲು ಅನುಕೂಲ ವಾಗುವಂತ ಕೆಲವು ಕ್ರಿಯೆಗಳು ಉಂಟು
ಎಂಬುದು ಆಶ್ಚರ್ಯಕರವಾದ ಒಂದು ವಿಷಯ ವುಂಟು .
ಹೌದು ಬ್ಯುಟಿಪಾರ್ಲರ್ಗಳು ಕೂಡ ಇದಕ್ಕಾಗಿ ಕೆಲವು ಚಿಕಿತ್ಸೆಗಳನ್ನು ಮಾಡುತ್ತವೆ .ಆದರೆ ಅವುಗಳು ಹೆಚ್ಚಿನ ಮೊತ್ತದದಾಗಿದ್ದು ಮತ್ತು ರಾಸಾಯನಿಕ ಪದಾರ್ಥಗಳು
ನೈಸರ್ಗಿಕವಾಗಿ ಬೆಳೆಯುವ ಕೂದಲನ್ನು ಹಾಳುಗೆಡವುತ್ತವೆ ,ಅಲ್ಲದೆ ಕೆಲವು ಸೈಡ್ ಎಫೆಕ್ಟ್ ಗಳನ್ನೂ ಉಂಟು ಮಾಡುತ್ತದೆ .
ತಲೆ ಕೂದಲು ಬೆಳೆಯಲು @@@@@@@@
ಮನೆಯಲ್ಲೇ ನಮ್ಮ ಬಳಿ ಇರುವ ನೈಸರ್ಗಿಕ ಪದಾರ್ಥ ಗಳನ್ನೂ ಉಪಯೋಗಿಸಿ ಕೂದಲ ಬೆಳವಣಿಗೆಯನ್ನು ಹೆಚ್ಚಿಸಬಹುದು ಎಂದರೆ ಯಾರು ತಾನೇ ಬೇಡವೆಂದು ಹೇಳುತ್ತಾರೆ .
ಅಂತಹ ಒಂದು ಚಿಕಿತ್ಸಯೇ ಅಗಸೆ ಬೀಜದ ಮೂಲಕ ಕೂದಲ ಬೆಳವಣಿ ಗೆಯನ್ನು ಹೇಗೆ ಅನುಕೂಲ ಮಾಡಿಕೊಳ್ಳ ಬಹುದು ಎಂಬುದರ ಬಗ್ಗೆ ಈ ಲೇಖನ .
ವಿಟಮಿನ್E
Vitamin E ನ್ಯೂಟ್ರಿಯೆಂಟ್ಸ್ ಪ್ರಬಲವಾದ ಆಂಟಿಆಕ್ಸಿಡೆಂಟ್ಗಳ ವೈಶಿಷ್ಟಗಳು .ಇದರಿಂದ ನೆತ್ತಿ ಭಾಗವನ್ನು ಮತ್ತು ಕೂದಲ ಹಾನಿಯನ್ನು ತಡೆಯುತ್ತದೆ ರಕ್ತ ಸಂಚಾರವನ್ನು ಹೆಚ್ಚಿಸಿ ,ಬಾಲ ನೆರೆಯನ್ನು ತಡೆಯುವುದರಲ್ಲಿ ವೈಟಮಿನ್ E ಸತ್ವ ಇನ್ನಷ್ಟು ಉಪಯುಕ್ತ ವಾಗಿರುತ್ತದೆ .
PH ಗಾತ್ರ ##
ಅಗಸೆ ಬೀಜ ನಮ್ಮ ನೆತ್ತಿಯಲ್ಲಿರುವ pH ಪ್ರಮಾಣವನ್ನು ಕಾಪಾಡುವುದರಲ್ಲಿ ಸಹಾಯ ಮಾಡುತ್ತದೆ .ಮತ್ತು ತಲೆಯಲ್ಲಿ ಎಣ್ಣೆ ಅಂಶ ಇದ್ದು ಕೂದಲು ಬೆಳವಣಿಗೆಗೆ ಸಹಾಯ ಮಾಡಿ ,ಕೂದಲು ಅರೋಗ್ಯ ವಾಗಿಡಲು ಮತ್ತು ನೆತ್ತಿಯನ್ನು ಮೃದುವಾಗಿಟ್ಟು ,ಕೊಬ್ಬು ಗ್ರಂಥಿಗಳು ಆರೋಗ್ಯ ವಾಗಿರಲು ಸಹಾಯ ಮಾಡುತ್ತದೆ .ಇದರಿಂದ ಕೂದಲು ಅರೋಗ್ಯ ವಾಗಿ ದಟ್ಟ ವಾಗಿ ಬೆಳೆಯಲು ಸಹಕಾರಿಯಾಗಿದೆ .
ತಲೆ ಕೂದಲ ತಾಜಾತನ ###$
ಒಮೇಗಾ 3ಫ್ಯಾಟ್ ಆಮ್ಲ ,ಈ ಅಗಸೆ ಬೀಜದ ಮೂಲಕ ನಮಗೆ ಸಿಗುತ್ತದೆ .ಅರೋಗ್ಯ ವಾದ ಕೂದಲ ಬೆಳವಣಿಗೆಗೆ ಈ ಕೊಬ್ಬು ಆಮ್ಲಗಳು ಮುಖ್ಯವಾಗಿವೆ .ಕೂದಲಿನ ಬೇರು ಗಳನ್ನು ಭದ್ರವಾಗಿಡಲು ,ಮತ್ತು ಕೂದಲಿಗೆ ತಾಜಾತನವನ್ನು ನೀಡಿ ,ಹಾನಿಯಾಗದಂತೆ ಇರಲು ಸಹಕಾರಿಯಾಗಿದೆ .
ಇದರಿಂದ ಹೊಸದಾಗಿ ಬೆಳೆಯುವ ಕೂದಲಿಗೆ ಬುಡಸಮೇತ ಆರೋಗ್ಯ ವಾಗಿರಿಸಲು ಅನುವುಮಾಡಿಕೊಡುತ್ತದೆ .
ಕೂದಲಿನ ಎಲಾಸ್ಟಿಕ್ ಗುಣವನ್ನು ಬಲವಾಗಿರಿಸಲು ಒಮೇಗಾ 3 ಕೊಬ್ಬು ಆಮ್ಲಗಳು ಸಹಕಾರಿಯಾಗಿದೆ ..
ಅಗಸೆ ಬೀಜದ ಸತತ ಉಪಯೋಗದಿಂದ ,ಕೂದಲು ಉದುರುವಿಕೆ ,ತಲೆಯಲ್ಲಿ ಉಂಟಾಗುವ ಚರ್ಮ ಸಮಸ್ಯೆ ಡಾನ್ಡ್ರಾಫ್ ಮುಂತಾದ ತೊಂದರೆಗಳನ್ನು ತಡೆಯುತ್ತದೆ .
ಅಗಸೆ ಬೀಜ ಕರಗುವ ಮತ್ತು ಕರಗದೇ ಇರುವ ಫೈಬರ್ ಆಗರವಾಗಿದೆ .
ಇದನ್ನು ತಲೆಗೆ ಉಪಯೋಗಿಸುವದರ ಜೊತೆಗೆ ,ಆಹಾರದಲ್ಲೂ ಸೇರಿಸಿಕೊಳ್ಳುವುದರಿಂದ ಹಲವು ತೊಂದರೆಗಳಿಂದ ಹೊರಬರಬಹುದು .
######ಅಗಸೆ ಬೀಜದ ಹೇರ್ ಜೆಲ್ ###
ಅಗಸೆ ಬೀಜ1/4 ಕಪ್
2ಲೋಟ ನೀರು
1ನಿಂಬೆಹಣ್ಣು .
ಮಾಡುವ ವಿಧಾನ .****
ಒಂದುಪಾತ್ರೆಯಲ್ಲಿ ನೀರು ಹಾಕಿ ಅಗಸೆಬೀಜವನ್ನು ಚೆನ್ನಾಗಿ ಬೇಯಲು ಬಿಡಿ .ಇದು ನೀರು ಒಳ್ಳೆ ಜೆಲ್ನಂತೆ ಆಗುತ್ತದೆ .ಆಗ ಸ್ಟೋವ್ ಆರಿಸಿ ನಿಂಬೆ ಹಣ್ಣು ಮಿಕ್ಸ್ ಮಾಡಿ ಕಲಸಿ ಇಡಿ .ತಣ್ಣಗಾದ ನಂತರ ಬಾಟಲ್ನಲ್ಲಿ ಸಂಗ್ರಹಿಸಿ .
ಆ ನೀರನ್ನು ತಲೆಗೆಹಚ್ಚಿ ತಲೆ ಬಾಚಲು ಮತ್ತು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದು ರುವುದು ನಿಲ್ಲುತ್ತದೆ ..
ವಾರದಲ್ಲಿಯಾವಾಗ ಬೇಕಾದರೂ ಎಣ್ಣೆಯಂತೆ ಹಚ್ಚಿ ಸ್ನಾನಮಾಡಬಹುದು ,ಅಥವಾ ಎಣ್ಣೆಯಂತೆಯೂ ಬಳಸಬಹುದು