Best Home Remedies For Hangover: ಪಾರ್ಟಿ ಬಳಿಕ ಹ್ಯಾಂಗೊವರ್ ಆಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಹ್ಯಾಂಗೊವರ್‌ನಿಂದಾಗಿ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಕೆಲವು ಜನರು ಹ್ಯಾಂಗೊವರ್‌ನಿಂದ ತಲೆನೋವು, ಆಸಿಡಿಟಿ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಮನೆಮದ್ದುಗಳನ್ನು ಅನುಸರಿಸಿ ಮತ್ತು ಸುಲಭವಾಗಿ ಪರಿಹಾರವನ್ನು ಪಡೆಯಿರಿ.
ಹೆಚ್ಚು ನೀರು ಕುಡಿಯಿರಿ: ಕುಡಿದ ನಂತರ ಹ್ಯಾಂಗೊವರ್ ತಡೆಗಟ್ಟಲು ಸಾಕಷ್ಟು ನೀರು ಕುಡಿಯುವ ಅಗತ್ಯವಿದೆ. ಮಿನರಲ್ಸ್ ಮತ್ತು ಎಲೆಕ್ಟ್ರೋಲೈಟ್ ಇರುವ ನೀರನ್ನು ಕುಡಿಯುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು. ಅತಿಯಾಗಿ ಕುಡಿದ ನಂತರ ಪದೇ ಪದೇ ಮೂತ್ರ ವಿಸರ್ಜನೆ, ವಾಂತಿ, ಆಯಾಸದಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಶುಂಠಿ ಟೀ : ಶುಂಠಿ ಚಹಾವು ಹ್ಯಾಂಗೋವರ್‌ಗಳನ್ನು ನಿವಾರಿಸಲು ಸಹ ಪರಿಣಾಮಕಾರಿಯಾಗಿದೆ. ಹಾಗೆಯೇ ಶುಂಠಿಯ ರಸವನ್ನು ನೀರಿಗೆ ಬೆರೆಸಿ ಉಪ್ಪು ಬೆರೆಸಿ ಸೇವಿಸಿದರೆ ಹ್ಯಾಂಗೋವರ್ ನಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಎಳೆನೀರು: ಅಲ್ಕೋಹಾಲ್ ಸೇವನೆಯು ನಿರ್ಜಲೀಕರಣದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ ಇಂತಹ ಸಮಸ್ಯೆಗಳನ್ನು ತಪ್ಪಿಸಲು ನೀವು ಎಳೆನೀರನ್ನು ಕುಡಿಯಬೇಕು. ಎಳೆನೀರಿನಿಂದ ನೀವು ಹ್ಯಾಂಗೊವರ್‌ನಿಂದ ಸುಲಭವಾಗಿ ಪರಿಹಾರವನ್ನು ಪಡೆಯುತ್ತೀರಿ.
ನಿಂಬೆ ರಸ: ನಿಂಬೆ ರಸದಲ್ಲಿ ಸಿಟ್ರಿಕ್ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಆದ್ದರಿಂದ ಈ ನೀರನ್ನು ಕುಡಿಯುವುದರಿಂದ ಹ್ಯಾಂಗೊವರ್‌ನಿಂದ ಸುಲಭ ಪರಿಹಾರ ಸಿಗುತ್ತದೆ. ತಲೆನೋವು ಮತ್ತು ವಾಂತಿ ಕೂಡ ದೂರವಾಗುತ್ತದೆ.