ಊಟದ ಮಧ್ಯೆ ಸಿಗುವ ಕರಿಬೇವಿನ ಎಲೆ ತಿನ್ನದೇ ಪಕ್ಕಕ್ಕಿಡಬೇಡಿ!


ಕರಿಬೇವಿನ ಎಲೆ ತಿನ್ನೋದ್ರಿಂದ, ದೇಹದ ತೂಕ ಮಾತ್ರ ಅಲ್ಲ, ಕೊಲೆಸ್ಟ್ರಾಲ್ ಕೂಡ ಕಮ್ಮಿಯಾಗುತ್ತೆ!


ಕೆಟ್ಟ ಕೊಬ್ಬು ಹೃದಯಕ್ಕೆ ತೊಂದರೆ, ಅದೇ ರೀತಿ ಬೊಜ್ಜು ನಿಮ್ಮ ಸೌಂದರ್ಯಕ್ಕೆ ಮುಳುವು.ಇವೆರಡನ್ನೂ ನಿವಾರಿಸುವ ತಂತ್ರ ಕರಿಬೇವಿನ ಸೊಪ್ಪಿನಲ್ಲಿ ಅಡಗಿದೆ.
ಕರಿಬೇವಿನ ಎಲೆ ತಿನ್ನೋದ್ರಿಂದ, ದೇಹದ ತೂಕ ಮಾತ್ರ ಅಲ್ಲ, ಕೊಲೆಸ್ಟ್ರಾಲ್ ಕೂಡ ಕಮ್ಮಿಯಾಗುತ್ತೆ!

ಒಗ್ಗರಣೆ ಎಂದ ತಕ್ಷಣ ನೆನಪಿಗೆ ಬರುವುದು ಸಾಸಿವೆ, ಕರಿಬೇವಿನ ಸೊಪ್ಪು. ಅದರಲ್ಲೂ ಕರಿಬೇವಿನ ಸೊಪ್ಪು ಇಲ್ಲದಿದ್ದರೆ ಅಂತಹ ಒಗ್ಗರಣೆ ಅಪೂರ್ಣ. ತಯಾರಾಗುವ ಆಹಾರದ ರುಚಿ ಹೆಚ್ಚಿಸಲು ಕರಿಬೇವುನ ಸೊಪ್ಪು ಬೇಕೇ ಬೇಕು. ನುರಿತ ಆರೋಗ್ಯ ತಜ್ಞರು ಕರಿಬೇವಿನ ಎಲೆಗಳನ್ನು ಹಸಿಯಾಗಿ ಕೂಡ ತಿನ್ನಬೇಕು ಎಂದು ಹೇಳುತ್ತಾರೆ. ಹಸಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.



ಕರಿಬೇವಿನ ಎಲೆಗಳ ಬಗ್ಗೆ ನೋಡುವುದಾದರೆ...
ತಲೆ ಕೂದಲಿನಿಂದ ಹಿಡಿದು ಚರ್ಮದ ಕಾಂತಿಯವರೆಗೆ ಇದ ರಿಂದ ಲಾಭಗಳಿರುತ್ತವೆ. ನಮ್ಮ ಹಿರಿಯರು ಹೇಳುವಂತೆ ಕರಿ ಬೇವಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ನಮ್ಮ ದೇಹದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಂತೆ.
ಹೀಗಾಗಿ ವ್ಯಾಯಾಮ ಮಾಡುವ ಅಭ್ಯಾಸ ಇದ್ದವರು ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಕರಿಬೇವಿನ ಎಲೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹಸಿಯಾಗಿ ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ಜೊತೆಗೆ ಸೊಂಟದ ಭಾಗದ ಕೊಬ್ಬನ್ನು ಸಹ ಸುಲಭವಾಗಿ ಕರಗಿಸುತ್ತದೆ.
ಅಪಾರವಾದ ಆರೋಗ್ಯ ಪ್ರಯೋಜನಗಳು ಇದರಲ್ಲಿವೆ


ಆಯುರ್ವೇದ ಶಾಸ್ತ್ರ ಹೇಳುವ ಹಾಗೆ ಒಂದು ಹಿಡಿ ಕರಿಬೇವಿನ ಎಲೆ ಗಳನ್ನು ಮನೆಯ ಸದಸ್ಯರು ಹಂಚಿ ಕೊಂಡು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ತಮ್ಮದಾಗಿಸಿಕೊಳ್ಳ ಬಹುದು. ಉದಾಹರಣೆಗೆ ಸಕ್ಕರೆ ಕಾಯಿಲೆ, ಬೊಜ್ಜು, ಹೆಚ್ಚಾದ ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ಇವುಗಳಿಗೆ ಮುಕ್ತಿ ಪಡೆದುಕೊಳ್ಳ ಬಹುದು.

ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ.....
ಕರಿಬೇವಿನ ಎಲೆಗಳನ್ನು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ವಿಚಾರದಲ್ಲಿ ಅಲ್ಲಗಳೆಯುವಂತಿಲ್ಲ. ಏಕೆಂದರೆ ಇದು ನಿಮ್ಮ ಕರುಳಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಯನ್ನು ಉತ್ತೇಜಿಸುತ್ತದೆ.
ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರಿಬೇವಿನ ಎಲೆಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಉತ್ತಮ ಲಾಭಗಳನ್ನು ತಂದುಕೊಡುತ್ತವೆ.
ಇವುಗಳಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಇರುವ ಕಾರಣದಿಂದ ನಿಮ್ಮ ದೇಹದಿಂದ ವಿಷಕಾರಿ ಅಂಶ ಗಳನ್ನು ಹೋಗಲಾಡಿಸು ವಲ್ಲಿ ಕೆಲಸ ಮಾಡುತ್ತವೆ.​


ವಾಕರಿಕೆ ಬರದಂತೆ ತಡೆಯುತ್ತದ
ಕರಿಬೇವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುವುದರ ಜೊತೆಗೆ ವಾಂತಿ, ವಾಕರಿಕೆ ಇತ್ಯಾದಿ ತೊಂದರೆಗಳು ಸಹ ಮಾಯವಾಗುತ್ತವೆ. ನಿಯಮಿತವಾಗಿ ಆಗ ಕರಿಬೇವಿನ ಸೊಪ್ಪು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಯಾಗುತ್ತದೆ ಮತ್ತು ದೇಹದ ಕೊಬ್ಬು ಹಾಗೂ ಬೊಜ್ಜಿನ ಪ್ರಮಾಣ ಕೂಡ ಇಳಿಕೆ ಆಗುತ್ತದೆ.
ಇಷ್ಟು ಮಾತ್ರವಲ್ಲದೆ ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಮತ್ತು ಇಳಿಕೆ ಆಗುವುದನ್ನು ಇದು ನಿಯಂತ್ರಣ ಮಾಡುತ್ತದೆ. ಹೀಗಾಗಿ ಮಧುಮೇಹ ಕೂಡ ಕಂಟ್ರೋಲ್ ನಲ್ಲಿ ಉಳಿಯುತ್ತದೆ.​

ಕರಿಬೇವಿನ ಎಲೆಗಳನ್ನು ಸೇವಿಸುವ ವಿಧಾನ


ಆರೋಗ್ಯಕ್ಕೆ ಉತ್ತಮ ಲಾಭಗಳನ್ನು ಪಡೆದುಕೊಳ್ಳಲು ಕರಿಬೇವಿನ ಎಲೆ ಗಳನ್ನು ಸೇವಿಸಬಹುದು. ನಿಮ್ಮ ತೂಕವನ್ನು ಕಡಿಮೆ ಮಾಡಿ ಕೊಳ್ಳುವು ದರಿಂದ ಹಿಡಿದು ಇನ್ನು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀವು ಇದರಿಂದ ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ಮನೆಯಲ್ಲಿ ನೀವು ಸುಲಭವಾಗಿ ಮತ್ತು ಸರಳವಾಗಿ ಕರಿಬೇವಿನ ಎಲೆಗಳ ಡಿಕಾಕ್ಷನ್ ಈ ರೀತಿ ತಯಾರಿಸಿ ಕುಡಿಯಬಹುದು.

ಹೊಟ್ಟೆ ಬೊಜ್ಜು ಕರಗಿಸುವ ಕರಿಬೇವು

ತಯಾರಿಸುವ ವಿಧಾನ
ಒಂದು ಗ್ಲಾಸ್ ನೀರು ತೆಗೆದುಕೊಂಡು ಅದನ್ನು ಒಲೆಯ ಮೇಲೆ ಚೆನ್ನಾಗಿ ಕುದಿಸಿ.
ಇದಕ್ಕೆ ಹತ್ತರಿಂದ ಹದಿನೈದು ಕರಿಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಕಾಯಲು ಬಿಡಿ.
ಈಗ ಇದು ತಣ್ಣಗಾದ ನಂತರದಲ್ಲಿ ಸೋಸಿಕೊಂಡು ಕುಡಿಯಿರಿ.
ಬೇಕಿದ್ದರೆ ರುಚಿಗಾಗಿ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆಹಣ್ಣಿನ ರಸ ಕೂಡ ಸೇರಿಸಬಹುದು.
ನಿರೀಕ್ಷಿತ ಫಲಿತಾಂಶಗಳಿಗಾಗಿ 20 ದಿನ ಅಥವಾ ಒಂದು ತಿಂಗಳು ಇದನ್ನು ಪ್ರತಿ ದಿನ ಕುಡಿಯಬೇಕು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...