ಪೂಜೆಗೆ ಅಹ೯ಳಾದ ಆಷಾಢ....

ಆಷಾಢ ಇಂದ್ರಲೋಕದ ದೇವತೆ .ಒಮ್ಮೆ ಆಷಾಢ ಶಿವನನ್ನು ನೋಡುವ ಬಯಕೆಯಿಂದ ನಾಗಕನ್ಯೆಯ ರೂಪವನ್ನು ತಾಳಿ ಕೈಲಾಸವನ್ನು ಪ್ರವೇಶಿಸುತ್ತಾಳೆ. ಆಗ ಶಿವ ಧ್ಯಾನಾಸ್ಥನಾಗಿರುತ್ತಾನೆ .ಶಿವನನ್ನು ಕಂಡೊಡನೆ ಆಕೆ ಪಾರ್ವತಿಯ ರೂಪವನ್ನು ಧರಿಸಿ ಶಿವನ ಪಕ್ಕ ಆಸೀನಳಾಗುತ್ತಾಳೆ .
ಎಲ್ಲವನ್ನು ಬಲ್ಲ ಆ ಮಹಾದೇವ ಆಕೆಯ ಕುತಂತ್ರವನ್ನು ತಿಳಿದು ಕೋಪನಿಷ್ಠನಾಗುತ್ತಾನೆ .ಕೋಪಾಗ್ನಿಯಿಂದ ಶಿವ ತ್ರಿಶೂಲದಿಂದ ಆಕೆಯನ್ನು ದೂರ ಸರಿಯೆಂದು ತಿವಿಯುತ್ತಾನೆ .ತ್ರಿಶೂಲದಿಂದ ಹೊರಟ ಜ್ವಾಲಾಗ್ನಿಯು ಆಷಾಢಳನ್ನು ಪರಿಶುದ್ಧಳನ್ನಾಗಿಸುತ್ತದೆ .ಆದರೂ ಶಿವನ ಕೋಪ ಕಡಿಮೆಯಾಗುವುದಿಲ್ಲ .ಆಗ ಆಷಾಢ ಶಿವನಿಗೆ ತಲೆಬಾಗಿ ನಾನು ನಿಮ್ಮನ್ನು ಮೆಚ್ಚಿದ್ದರಿಂದ ಹೀಗೆ ಮಾಡಬೇಕಾಯಿತು ನನ್ನ ತಪ್ಪನ್ನು ಮನ್ನಿಸಿ ಎಂದು ಶಿವನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ .ಆದರೂ ಶಿವ ಆಕೆಯ ತಪ್ಪನ್ನು ಕ್ಷಮಿಸುವುದಿಲ್ಲ ಬದಲಿಗೆ ಭೂಲೋಕದಲ್ಲಿ ಕಹಿ ರುಚಿಯ ಬೇವಿನ ಮರವಾಗಿ ಜನಿಸು ಎಂದು ಶಾಪವನ್ನು ಕೊಡುತ್ತಾನೆ. 
ಆಗ ಆಷಾಢ ಶಾಪ ವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ .ಆಗ ಶಿವ ಭೂಲೋಕದಲ್ಲಿ ಬೇವಿನ ಮರವಾಗಿ ಜನಿಸಿದರೂ ಪೂಜಕ್ಕೆ ಅರ್ಹಳಾಗು ಎಂದು ಆಶೀರ್ವದಿಸುತ್ತಾನೆ .ಆ ಕಾರಣ ಆಷಾಢ ಮಾಸದಲ್ಲಿ ಪಾರ್ವತಿ ಸ್ವರೂಪಳಾದ ಬೇವಿನ ಮರವನ್ನು ಪೂಜಿಸುವ ವಾಡಿಕೆ ಇದೆ. ಹೀಗೆ ಭೂಮಿಯ ಮೇಲೆ ಬೇವಿನ ಮರವಾಗಿ ಜನಿಸಿದ ಆಷಾಢ ಪೂಜಾಹ೯ಳಾದಳು.
ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.🙏🏻

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...