ಕಿವಿಯಲ್ಲಿ ತುರಿಕೆ ಇದ್ದರೆ ಈ ಸರಳ ಮನೆಮದ್ದನ್ನು ಬಳಸಿ! home remedies for itchy ...


ಕಿರಿ ಕಿರಿ ಉಂಟು ಮಾಡುವ ಕಿವಿ ತುರಿಕೆಗೆ ಇಲ್ಲಿದೆ ಸರಳ ಮನೆಮದ್ದು

ಇದರಿಂದ ಕಿವಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ನಿರ್ಮಾಣವಾಗಬಹುದು. ಇಂತಹ ವೇಳೆ ಕಿವಿಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ತುರಿಕೆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ದೇಹದ ಎಲ್ಲಾ ಅಂಗಾಂಗಗಳ ಆರೋಗ್ಯ ಬಹಳ ಮುಖ್ಯ. ಅದರಲ್ಲೂ ಸೂಕ್ಷ್ಮ ಅಂಗಗಳೆಂದು ಕರೆಯಲ್ಪಡುವ ಕಣ್ಣುಗಳು, ಮೂಗು ಹಾಗೂ ಕಿವಿಗಳ ಬಗ್ಗೆ ತುಸು ಹೆಚ್ಚೇ ಕಾಳಜಿವಹಿಸಬೇಕು. ಸಾಮಾನ್ಯವಾಗಿ ಮೂಗು ಮತ್ತು ಕಿವಿಯಲ್ಲಿ ಅಲರ್ಜಿಗಳು ಉಂಟಾಗುತ್ತದೆ. ಕಿವಿಯಲ್ಲಿ ಕಾಣಿಸಿಕೊಳ್ಳುವ ಕಿರಿಕಿರಿ ಹಲವರ ನಿದ್ದೆಗೆಡಿಸುತ್ತದೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಇಂತಹ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಅದು ಮುಂದೆ ಕಿವಿ ಸೋಂಕಾಗಿ ಪರಿವರ್ತನೆಯಾಗಬಹುದು.

ಕಿವಿಯಲ್ಲಿ ಆಗಾಗ ಉಂಟಾಗುವ ತುರಿಕೆಯು ಜನರ ಮಧ್ಯೆ ನಿಮ್ಮನ್ನು ಮುಜಗರಕ್ಕೀಡು ಮಾಡಬಹುದು. ಏಕೆಂದರೆ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಕೈ ಬೆರಳು ಅಥವಾ ಇನ್ನಿತರ ಸಾಧನಗಳು ಕಿವಿಯೊಳಗೆ ಆಟೋಮ್ಯಾಟಿಕ್ ಆಗಿ ಹೋಗಿಬಿಡುತ್ತದೆ. ಇದೊಂದು ಸಣ್ಣ ಸಮಸ್ಯೆ ಎಂದು ಪರಿಗಣಿಸಿ ನೀವು ಕಿವಿಯೊಳಗೆ ಹಾಕುವ ಸಾಮಗ್ರಿ ತಮಟೆ ಮೇಲೆ ಪರಿಣಾಮ ಬೀರಬಹುದು ಎಂಬುದು ಕೂಡ ನೆನಪಿರಲಿ.

ಕಿವಿಯ ತುರಿಕೆ ಸಾಮಾನ್ಯವಾಗಿದ್ದರೂ, ಅದು ಪದೇ ಪದೇ ಕಾಣಿಸುತ್ತಿದ್ದರೆ ಪರೀಕ್ಷೆಗೆ ಒಳಪಡಿಸುವುದು ಉತ್ತಮ. ಇಲ್ಲದಿದ್ದಲ್ಲಿ ಮುಂದೆ ಅದು ಕಿವಿ ಉರಿಯೂತ, ಕಿವಿ ಸೋರುವಿಕೆಗೆ ಕಾರಣವಾಗಬಹುದು. ಸಾಮಾನ್ಯ ಕಿವಿ ರಂಧ್ರ ತುರಿಕೆಗೆ ಒಣಗುವಿಕೆ, ಕಿವಿ ಮೇಣದ ಸಂಗ್ರಹ, ಸೋಂಕು ಅಥವಾ ಅಲರ್ಜಿ ಕಾರಣವಾಗಿರುತ್ತವೆ. ಇಂತಹ ತೊಂದರೆಗಳಿಗೆ ನೈಸರ್ಗಿಕ ಔಷಧಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಕಿವಿಯ ತುರಿಕೆ ಹೋಗಲಾಡಿಸಲು ಹೀಗೆ ಮಾಡಿ:

ಕಿವಿಗಳ ಸ್ವಚ್ಛತೆ:

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತುರಿಕೆ ಮುಖ್ಯ ಕಾರಣ ಕಿವಿಯಲ್ಲಿ ಸಂಗ್ರಹವಾಗುವ ಮೇಣದ ರೀತಿ ವಸ್ತು. ಇದನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಕಿವಿ ಅಲರ್ಜಿಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಇಯರ್ ಬಡ್ಸ್​ಗಳು ಲಭ್ಯವಿದೆ. ಇವುಗಳನ್ನು ಬಳಸಿ ಎಚ್ಚರಿಕೆಯಿಂದ ಕಿವಿ ಮೇಣವನ್ನು ತೆಗೆಯಿರಿ. ಇದರಿಂದ ತುರಿಕೆ ದೂರವಾಗುತ್ತದೆ.
ಬೆಳ್ಳುಳ್ಳಿ ಎಣ್ಣೆ:
ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ. ಅದರಲ್ಲೂ ಬೆಳ್ಳುಳ್ಳಿಯಲ್ಲಿ ಸೂಕ್ಷ್ಮಾಣುಗಳನ್ನು ನಿರ್ನಾಮ ಮಾಡುವ ಅಂಶಗಳು ಕಂಡು ಬರುತ್ತವೆ. ಹೀಗಾಗಿ ಈ ಎಣ್ಣೆಯನ್ನು ಬಳಸಿ ತುರಿಕೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ಬಿಸಿ ಮಾಡಿ. ಅದು ಉಗುರು ಬೆಚ್ಚಗಾಗುವ ವೇಳೆ ಎಣ್ಣೆಯನ್ನು ಕಿವಿಯೊಳಗೆ ಹನಿ ಹನಿಯಾಗಿ ಹಾಕಿಕೊಳ್ಳಿ. ಇದರಿಂದ ಕಿವಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ.

ತೇವಾಂಶ ಮುಕ್ತ ಮಾಡಿ:
ಸ್ನಾನದ ವೇಳೆ ಕಿವಿಯೊಳಗೆ ನೀರು ಹೋಗುವುದರಿಂದ ರಂಧ್ರವು ತೇವಾಂಶದಿಂದ ಕೂಡಿರುತ್ತವೆ. ಇದರಿಂದ ಕಿವಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ನಿರ್ಮಾಣವಾಗಬಹುದು. ಇಂತಹ ವೇಳೆ ಕಿವಿಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ತುರಿಕೆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಬಿಳಿ ವಿನೇಗರ್:
ಕಿವಿ ರಂಧ್ರವು ತುಂಬಾ ತುರಿಸುತ್ತಿದ್ದರೆ ಬಿಳಿ ವಿನೇಗರ್ ಬಳಸಿ ಪರಿಹಾರ ಕಂಡುಕೊಳ್ಳಬಹುದು. ವಿನೇಗರ್​ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ, ನಾಲ್ಕೈದು ದಿನಗಳ ಕಾಲ ಪ್ರತಿದಿನ ಹರಡು ಹನಿಗಳನ್ನು ಕಿವಿಗೆ ಹಾಕಿಕೊಳ್ಳಿ. ಇದರಿಂದ ತುರಿಕೆ ಸಮಸ್ಯೆ ಕಡಿಮೆಯಾಗುತ್ತದೆ.

ಟಿ ಟ್ರೀ ಆಯಿಲ್:
ಟಿ ಮರದ ಎಣ್ಣೆಯಲ್ಲಿ ಅ್ಯಂಟಿ ಬ್ಯಾಕ್ಟೀರಿಯಾ ಅಂಶಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಕಿವಿ ತುರಿಕೆಗೆ ಕಾರಣವಾಗುವ ಸೂಕ್ಷ್ಮಾಣು ವೈರಸ್​ಗಳ ವಿರುದ್ಧ ಈ ತೈಲದಲ್ಲಿರುವ ಔಷಧೀಯ ಗುಣಗಳು ಹೋರಾಡುತ್ತವೆ. ಈ ಮನೆಮದ್ದನ್ನು ತಯಾರಿಸಲು ಟಿ ಟ್ರೀ ಮರದ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿದರೆ ಸಾಕು. ಬಳಿಕ ಇದರ ಕೆಲ ಹನಿಯನ್ನು ನೀವು ಕಿವಿಗೆ ಬಿಟ್ಟುಕೊಳ್ಳಿ. ಎಣ್ಣೆಯು ಕಿವಿಯ ರಂಧ್ರ ಭಾಗದ ಕೆಳವರೆಗೆ ಹೋಗುವ ತನಕ ತಲೆಯನ್ನು ಬಗ್ಗಿಸಿಟ್ಟುಕೊಳ್ಳಿ. ಇದಾಗಿ ಕೆಲ ನಿಮಿಷಗಳ ಬಳಿಕ ಕಿವಿಯನ್ನು ಸ್ವಚ್ಛಗೊಳಿಸಿದರೆ ತುರಿಕೆ ಸಮಸ್ಯೆ ಮಾಯವಾಗುತ್ತದೆ.

ನಿಮ್ಮ ಕಿವಿಯಲ್ಲಿ ಸಾಮಾನ್ಯವಾದ ತುರಿಕೆಗಳು ಕಂಡು ಬಂದರೆ ಮಾತ್ರ ಮನೆ ಔಷಧಿಗಳ ಮೊರೆ ಹೋಗಿ. ಇದರ ಹೊರತಾಗಿ ನಿರಂತರ ಕಿವಿ ನೋವು ಅಥವಾ ತುರಿಕೆಗಳು ಉಂಟಾಗುತ್ತಿದ್ದರೆ ವೈದಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...